ಕುಂದಗೋಳ: ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದ ಸಿದ್ದಲಿಂಗಯ್ಯ ಹಿರೇಮಠ ಅವರ ಮನೆಯಲ್ಲಿ ಅಡುಗೆ ಅನಿಲ ಸೊರಿಕೆಯಾಗಿ ಬೆಂಕಿ ತಗುಲಿ ನಾಲ್ವರು ಗಂಬೀರ ಗಾಯಗೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ ಅನಿಲ ಸಿಲಿಂಡರ್ ಬದಲಿಸುವ ವೇಳೆ ಸೋರಿಕೆಯಾಗಿದೆ. ಮನೆಯಲ್ಲಿ ನೀರು ಕಾಯಿಸುವ ಉರುವಲೆಯ ಬೆಂಕಿಗೆ ಅನಿಲ ಸಂಪರ್ಕವಾದ ಪರಿಣಾಮ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.
ಮನೆಯಲ್ಲಿದ್ದ ಸಿದ್ದಲಿಂಗಯ್ಯ ಹಿರೇಮಠ, ವಿಶಾಲ ಹಿರೇಮಠ, ಶ್ರೀಪಾದಯ್ಯ ಹಿರೇಮಠ, ನಿರ್ಮಲಾ ಹಿರೇಮಠ ಅವರಿಗೆ ಬೆಂಕಿ ತಗುಲಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.