ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ದೇವಸ್ಥಾನಗಳ ಬದಲು, ಪೊಲೀಸ್ ಠಾಣೆಗೆ ಪೂಜೆ!

Last Updated 3 ಮೇ 2020, 11:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನರಿಗೆ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಲು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೊಲೀಸರಿಗೆ ಹಾಗೂ ನಗರದ ಪೊಲೀಸ್ ಠಾಣೆಗೆ ಭಾನುವಾರ ಯುವಕರ ತಂಡ ಪೂಜೆ ಸಲ್ಲಿಸಿದೆ.

ಲಾಕ್ ಡೌನ್ ಕಾರಣ ಎಲ್ಲಾ ದೇವಸ್ಥಾನಗಳು, ಮಸೀದಿಗಳು ಹಾಗೂ ಚರ್ಚ್ಗಳನ್ನು ಬಂದ್ ಮಾಡಲಾಗಿದೆ. ಆದ್ದರಿಂದ ನಗರದ ಬಮ್ಮಾಪುರ ಓಣಿಯ ಯುವಕರು ಮತ್ತು ಹಿರಿಯರೆಲ್ಲರೂ ಸೇರಿಕೊಂಡು ಘಂಟಿಕೇರಿ ಪೋಲಿಸ್ ಠಾಣೆಗೆ ದೀಪ ಬೆಳಗಿ, ಟೆಂಗಿನಕಾಯಿ ಒಡೆದು ನೀವೇ ನಿಜವಾದ ದೇವರು ಎಂದು ವಿಶಿಷ್ಟವಾಗಿ ಕೊರೊನಾ ವಾರಿಯರ್ಸ್‌ ಗಳಿಗೆ ಗೌರವ ಸಲ್ಲಿಸಿದರು.

ಪೊಲೀಸ್ ಠಾಣೆ ಹೊಸ್ತಿಲಿಗೆ ತೆಂಗಿನಕಾಯಿ ಒಡೆದು, ಮಂಗಳಾರತಿ ಮಾಡಿ ತಲೆ ಹಚ್ಚಿ ನಮಸ್ಕಾರ ಮಾಡಿದರು.

ಮಂಜುನಾಥ ಯಂಟ್ರುವಿ, ವಿನಾಯಕ ಹಿಂಗನಕರ, ಕಾಶಿನಾಥ ಸೂರ್ಯವಂಶಿ ಈ ಕಾರ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT