ಹುಬ್ಬಳ್ಳಿ: ರನ್ ಹೊಳೆ ಹರಿಸಿದ ಗದುಗಿನ ಜನೊಪಂಥರ್ ಕ್ರಿಕೆಟ್ ಅಕಾಡೆಮಿ ತಂಡ, ಕೆಎಸ್ಸಿಎ ಧಾರವಾಡ ವಲಯದ ಆಶ್ರಯದಲ್ಲಿ ನಡೆಯುತ್ತಿರುವ ಎರಡನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ 107 ರನ್ಗಳ ಭರ್ಜರಿ ಗೆಲುವು ಸಾಧಿಸಿತು.

ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗದುಗಿನ ತಂಡ 50 ಓವರ್ಗಳಲ್ಲಿ 9 ವಿಕೆಟ್ಗೆ 314 ರನ್ ಕಲೆಹಾಕಿತ್ತು. ಪ್ರಜ್ವಲ್ ಗೌಡ (ಔಟಾಗದೆ 91), ಪ್ರಸಾದ ಕಲಬುರ್ಗಿ (51) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು. ಎದುರಾಳಿ ಹುಬ್ಬಳ್ಳಿಯ ಕರ್ನಾಟಕ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ 43.2 ಓವರ್ಗಳಲ್ಲಿ 207 ರನ್ ಕಲೆಹಾಕಿ ತನ್ನ ಹೋರಾಟ ಮುಗಿಸಿತು.

ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ‘ಸಿ’ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಈ ಗುರಿಯನ್ನು ಎದುರಾಳಿ ಹುಬ್ಬಳ್ಳಿಯ ಟ್ಯಾಲೆಂಟ್ ಕ್ಲಬ್ 48.4 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ತಲುಪಿತು.

ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ‘ಬಿ’ ತಂಡ 207 ರನ್ಗಳ ಗೆಲುವು ತನ್ನದಾಗಿಸಿಕೊಂಡಿತು.

ಈ ತಂಡ ಮೊದಲು ಬ್ಯಾಟ್ ಮಾಡಿ ಅಮರ್ ಘಾಲೆ (107) ಶತಕದ ಬಲದಿಂದ 48.4 ಓವರ್ಗಳಲ್ಲಿ 292 ರನ್ ಗಳಿಸಿತ್ತು. ಎದುರಾಳಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್ ಕ್ಲಬ್ ತಂಡ 13.3 ಓವರ್ಗಳಲ್ಲಿ 85 ರನ್ ಮಾತ್ರ ಕಲೆಹಾಕಿ ನಿರಾಸೆ ಅನುಭವಿಸಿತು. ಬೆಳಗಾವಿ ತಂಡದ ರೋಹಿತ್ ಧವಳೆ ಐದು, ಪ್ರಶಾಂತ ಮೂರು ಮತ್ತು ಜಿ. ಶುಭಂ ಎರಡು ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.