ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನುವಾರು ಮೇವಿಗಾಗಿ ಜೋಳ ಬೆಳೆಯಿರಿ’

ರೈತರಿಗೆ ಉಚಿತವಾಗಿ ಮೇವಿನ ಬೀಜ ವಿತರಣೆ
Published 16 ಜನವರಿ 2024, 15:11 IST
Last Updated 16 ಜನವರಿ 2024, 15:11 IST
ಅಕ್ಷರ ಗಾತ್ರ

ನವಲಗುಂದ: ‘ರೈತರು ರಾಸುಗಳಿಗೆ ಪೌಷ್ಟಿಕಾಂಶ ಭರಿತ ಮೇವಿನ ಅವಶ್ಯಕತೆ ಇದ್ದು, ಜಾನುವಾರುಗಳ ಮೇವಿಗಾಗಿ ಜೋಳ ಬೆಳೆಯಲು ರೈತರು ಮುಂದಾಗಲಿ’ ಎಂದು ಇಬ್ರಾಹಿಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ಕುರಿ ಹೇಳಿದರು.

ಅವರು ಇಬ್ರಾಹಿಂಪುರ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ರೈತರಿಗೆ ಉಚಿತವಾಗಿ ಮೇವಿನ ಬಿತ್ತನೆ ಬೀಜ  ವಿತರಿಸಿ ಮಾತನಾಡಿ, ಈ ಬಾರಿ ಮಳೆಗಾಲವಿಲ್ಲದ ಕಾರಣ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ. ರೈತರು ಜೋಳದ ಮೇವು ಸಂಗ್ರಹ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪಿಡಿಒ ರಾಘವೇಂದ್ರ ಪೂಜಾರ ಮಾತನಾಡಿ, ಈ ಬೀಜದಿಂದ ಬೆಳೆದ ಈ ಮೇವು ಜಾನುವಾರುಗಳಿಗೆ ಪೌಷ್ಟಿಕಾಂಶ ನೀಡುವುದರ ಜತೆಗೆ ಹಾಲಿನ ಇಳುವರಿ ನೀಡಲು ಸಹಾಯವಾಗಲಿದೆ. ಗ್ರಾಮದ ರೈತರು ಪಹಣಿ ದಾಖಲೆ ನೀಡಿ ಮೇವಿನ ಬಿತ್ತನೆ ಬೀಜ ಪಡೆದರು.

ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ದೊಡ್ಡಮನಿ, ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಸಿದ್ದವ್ವ ಹಟ್ಟಿ, ಮಾಲಾ ಚಪ್ಪಾಡಿ, ರತ್ನಾ ಹೊಂಬಳ, ಎಂಬಿಕೆ ಝಾರೀನಾಬಾನು ನವಲೂರ, ಗೀತಾ ಅಂಗಡಿ, ರಾಜೇಶ್ವರಿ ತಳವಾರ, ಶಿಲ್ಪ ಲಟಗೇರಿ, ಬಿಬಿಜಾನ ಅನುಸಾರಿ, ಮಾಲಾ ಚಿಪ್ಪಾಡಿ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT