ಧಾರವಾಡ: ನಗರದ ಎಂಟನೇ ವಾರ್ಡ್ನ ಹಲವೆಡೆ ಡಾಂಬರ್, ಸಿ.ಸಿ. ರಸ್ತೆ ನಿರ್ಮಿಸಲಾಗಿದೆ. ಒಳರಸ್ತೆಗಳಿಗೆ ಇಂಟರ್ ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅವಳಡಿಸಲಾಗಿದೆ. ಸಿಎಸ್ಆರ್ ಅನುದಾನದಡಿ ಶಾಲಾ ಕೊಠಡಿಗಳನ್ನೂ ನಿರ್ಮಿಸಲಾಗಿದೆ. ಚರಂಡಿ ನಿರ್ವಹಣೆ ಕೊರತೆ, ಬೀದಿನಾಯಿಗಳ ಹಾವಳಿ, ಕಸ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳು ಇವೆ.

ಚರಂತಿಮಠ ಗಾರ್ಡ್ನ್, ಕಾಮನಕಟ್ಟಿ, ವಿನಯ ಕುಲಕರ್ಣಿ ಬಡಾವಣೆ, ನಂದಿ ಲೇಔಟ್ ಸೇರಿದಂತೆ ಹಲವಡೆ ಸಿ.ಸಿ. ಹಾಗೂ ಡಾಂಬರ್ ರಸ್ತೆಗಳಿವೆ. ಬಸ್ತಿ ಓಣಿ, ವೆಂಕಟೇಶ್ವರ ಓಣಿ, ಜೋಶಿ ಗಲ್ಲಿ, ಕುಂಬಾರ ಓಣಿ ಮೊದಲಾದ ಓಣಿಗಳಲ್ಲಿ ಇಂಟರ್ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅವಳಡಿಸಲಾಗಿದೆ.

ಈ ವಾರ್ಡ್ನ ಕೆಲವು ಬಡಾವಣೆಗಳಲ್ಲಿ (ಹಳೇ ಧಾರವಾಡ) 24X7 ನೀರು ಪೂರೈಕೆ ಯೋಜನೆ ಕಾರ್ಯಗತವಾಗಿದೆ. ಕೋಳಿಕೇರಿ ಹೊಸ ಓಣಿ ಸೇರಿದಂತೆ ಹಲವು ರಸ್ತೆಗಳಲ್ಲಿ ಪೈಪ್ಲೈನ್ ಅಳವಡಿಕೆಗೆ ರಸ್ತೆ ಅಗೆದಿದ್ದು, ಗುಂಡಿಗಳು ಏರ್ಪಟ್ಟಿವೆ.

ವಾರ್ಡ್ನಲ್ಲಿ ಚರಂಡಿ ಸಮಸ್ಯೆ ಇದೆ. ಗಟಾರಗಳಲ್ಲಿ ಕಸ, ಕಡ್ಡಿ, ಹೂಳು ತುಂಬಿಕೊಂಡಿದೆ. 10 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಎರಡು ಅಂಗನವಾಡಿಗಳಿಗೆ ಮಾತ್ರ ಸ್ವಂತ ಕಟ್ಟಡಗಳು ಇವೆ. ನಿವೇಶಗಳು, ರಸ್ತೆ ಬದಿಗಳಲ್ಲಿ ಕಸ ಎಸೆಯಲಾಗುತ್ತದೆ. ಜಾನುವಾರುಗಳು, ಹಂದಿಗಳು ಕಸದ ರಾಶಿ ಎಳೆದಾಡಿ ರಾಡಿ ಎಬ್ಬಿಸುತ್ತವೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂಬುದು ವಾರ್ಡ್ ನಿವಾಸಿಗಳ ಆಗ್ರಹ.

‘ವ್ಯವಸ್ಥಿತವಾಗಿ ಗಟಾರಗಳನ್ನು ನಿರ್ಮಿಸಬೇಕು. ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕು. ಎರಡು ಉದ್ಯಾನಗಳಿವೆ. ಚರಂತಿಮಠ ಉದ್ಯಾನದಲ್ಲಿ ವಿಹಾರ ಪಥ, ವಿಶ್ರಾಂತಿ ಕೊಠಡಿ, ಕುಳಿತುಕೊಳ್ಳುವ ಬೆಂಚ್, ಮಕ್ಕಳ ಆಟಿಕೆ ಸಾಮಗ್ರಿಗಳು ಇವೆ. ದೇಸಾಯಿ ಉದ್ಯಾನದಲ್ಲಿ ವಿಹಾರಪಥ ನಿರ್ಮಿಸಿ ಗಿಡಗಳನ್ನೂ ನೆಡಲಾಗಿದೆ. ಆದರೆ, ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ’ ’ ಎಂದು ಕೋಳಿಕೇರಿ ನಿವಾಸಿ ನಾರಾಯಣ ರಾವುತ್ ಒತ್ತಾಯಿಸಿದರು.

‘ಹಲವಡೆ ಚರಂಡಿ ಸಮಸ್ಯೆ ಇದೆ. ಕೆಲವಡೆ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ರಭಸವಾಗಿ ಮಳೆ ಸುರಿದಾಗ ನೀರು ರಸ್ತೆ ನುಗ್ಗುತ್ತದೆ. ಕೆಲವು ಬಡಾವಣೆಗಳಲ್ಲಿ ಬೀದಿ ದೀಪ ಸಮಸ್ಯೆ ಇದೆ’ ಎಂದರು.ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಬೀದಿಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಬೇಕು. ನೀರಿನ ವ್ಯವಸ್ಥೆ ಚೆನ್ನಾಗಿದೆ ರಸ್ತೆಗಳು ಉತ್ತಮವಾಗಿವೆ ಮಹೇಶ ಸುಣಗಾರ ನಿವಾಸಿ ವಿನಯ ಕುಲಕರ್ಣಿ ಬಡಾವಣೆ

2022-23ರಲ್ಲಿ ಕೋಳಿ ಕೆರೆ ಅಭಿವೃದ್ಧಿಗೆ ಅಮೃತ-2 ಯೋಜನೆಯಡಿ ₹ 6 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಹೊಸ ಬಡವಾಣೆಗಳಿಗೆ 24X7 ನೀರು ಪೂರೈಕೆಯಾಗಲಿದೆ
ಶಂಕರ ಶೇಳಕೆ ಪಾಲಿಕೆ ಸದಸ್ಯ 8ನೇ ವಾರ್ಡ್

ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಬೀದಿಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಬೇಕು. ನೀರಿನ ವ್ಯವಸ್ಥೆ ಚೆನ್ನಾಗಿದೆ ರಸ್ತೆಗಳು ಉತ್ತಮವಾಗಿವೆ
ಮಹೇಶ ಸುಣಗಾರ ನಿವಾಸಿ ವಿನಯ ಕುಲಕರ್ಣಿ ಬಡಾವಣೆ

ಪ್ರಮುಖ ಬಡಾವಣೆಗಳು

ಆರ್.ವಿ. ದೇಸಾಯಿ ಬಡಾವಣೆ, ಚರಂತಿಮಠ ಗಾರ್ಡನ್, ವೆಂಕಟೇಶ್ವರ ಕಾಲೊನಿ, ರಾಮರಹೀಮ್ ಕಾಲೊನಿ, ನಂದಿ ಬಡಾವಣೆ, ಕುಂಬಾರ ಓಣಿ, ಕೋಳಿಕೇರಿ, ಕಾಮನಕಟ್ಟಿ, ಹೊಸ ಓಣಿ, ಲಕ್ಕಮ್ಮನಹಳ್ಳಿ, ವಿನಯ ಕುಲಕರ್ಣಿ ಬಡಾವಣೆ, ನಂದಿ ಬಡಾವಣೆ.

‘ಶಾಲಾ ಕೊಠಡಿ ನಿರ್ಮಾಣ ರಸ್ತೆ ಅಭಿವೃದ್ಧಿ‘

‘ಎಂಟನೇ ವಾರ್ಡ್ನ ಚರಂತಿಮಠ ಗಾರ್ಡ್ನನಲ್ಲಿ ₹90 ಲಕ್ಷದಲ್ಲಿ ಸಮುದಾಯ ಭವನ ₹20 ಲಕ್ಷದಲ್ಲಿ ಹಳೇ ಗರಡಿಮನಿ ಅಭಿವೃದ್ಧಿ ಕಾಮನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-2ಕ್ಕೆ ಕೋಲ್ ಇಂಡಿಯಾ ಲಿಮಿಟೆಡ್ ಸಾಮಾಜಿಕ ಸಾಂಸ್ಥಿಕ ನಿಧಿಯ (ಸಿಎಸ್ಆರ್) ₹1.11 ಕೋಟಿ ಅನುದಾನದಲ್ಲಿ ಎಂಟು ಕೊಠಡಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ₹25 ಲಕ್ಷ ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ₹28 ಲಕ್ಷ ಅನುದಾನದಲ್ಲಿ ನೂಚ್ಚಂಬ್ಲಿ ಬಾವಿ ಅಭಿವೃದ್ಧಿಪಡಿಸಿ ರಸ್ತೆ ನಿರ್ಮಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೇಳಕೆ ತಿಳಿಸಿದರು.

ಬೇಡಿಕೆಗಳು

* ನಿಯಮಿತವಾಗಿ ಕಸ ವಿಲೇವಾರಿ ಮಾಡಬೇಕು

* ಕಸ ಸಂಗ್ರಹಕ್ಕೆ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಬೇಕು

* ಗಟಾರಗಳ ನಿರ್ವಹಣೆ ಸ್ವಚ್ಛತೆಗೆ ಆದ್ಯತೆ ನಿಡಬೇಕು

* ಹೊಸ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು

* ಭದ್ರತೆಗೆ ಸಿಸಿಟಿವಿ ಕ್ಯಾಮೆರಾ ಅಳಡಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.