ತನಿಖೆ ವಿಳಂಬ ಯಾಕೆ?
ದೂರುದಾರರು 5–10 ಖಾತೆಗಳಿಂದ ವಂಚಕರಿಗೆ ಹಣ ವರ್ಗಾವಣೆ ಮಾಡುವುದರಿಂದ ಬ್ಯಾಂಕ್‌ನಿಂದ ಮಾಹಿತಿ ಪಡೆಯಲು ವಿಳಂಬವಾಗುತ್ತದೆ. ಆರೋಪಿಗಳು ಒಂದನೇ ಹಂತದಿಂದ ಎರಡನೇ ಹಂತಕ್ಕೆ ಹಣ ವರ್ಗಾವಣೆ ಮಾಡಿ, ಅದನ್ನು ಸೆಲ್ಫ್‌ಚೆಕ್ ಅಥವಾ ಎಟಿಎಂ ಕಾರ್ಡ್ ಮೂಲಕ ಪಡೆಯುವುದರಿಂದ ಖಾತೆಯಲ್ಲಿ ಹಣ ಕಡಿಮೆಯಾಗಿರುತ್ತದೆ. ಕೆಲವು ಪ್ರಕಣಗಳಲ್ಲಿ ಆರೋಪಿಗಳು ಅಬುದಾಬಿ ಮತ್ತು ಮಧ್ಯ ಏಷ್ಯಾಗಳಲ್ಲಿನ ಎಟಿಎಂ ಕೇಂದ್ರಗಳಿಂದ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ವಂಚಕರು ವಾಟ್ಸ್‌ಆ್ಯಪ್, ಟೆಲಿಗ್ರಾಮ್‌ನಿಂದ ಕರೆ ಮಾಡುತ್ತಾರೆ. ತನಿಖೆ ಕೈಗೊಂಡಾಗ ಅವು ಬಿಹಾರ, ಮಧ್ಯಪ್ರದೇಶ ಹಾಗೂ ಕೆಲವು ಕರೆಗಳು ವಿದೇಶಗಳಿಂದ ಬಂದಿರುವುದು ಗಮನಕ್ಕೆ ಬಂದಿವೆ. ನಕಲಿ ಆ್ಯಪ್, ಸಿಮ್ ಕಾರ್ಡ್, ವೆಬ್‌ಸೈಟ್ ಬಳಕೆ ಮಾಡುವುದರಿಂದ ಪತ್ತೆ ಕಾರ್ಯ ವಿಳಂಬವಾಗುತ್ತಿವೆ’ ಎನ್ನುವುದು ಪೊಲೀಸರ ಅಭಿಪ್ರಾಯ.