ಹುಬ್ಬಳ್ಳಿ: ಪಿಯುಸಿ ಬಳಿಕ ಕೌಶಲ ಆಧಾರಿತ ಶಿಕ್ಷಣ ಹೆಚ್ಚು ಉಪಯುಕ್ತ. ಕೋರ್ಸ್ ಮುಗಿದ ತಕ್ಷಣ ಹಾಲು ಒಕ್ಕೂಟಗಳಲ್ಲಿ, ಡೇರಿ ಉತ್ಪನ್ನಗಳ ಉತ್ಪಾದಿಸುವ ಕಂಪನಿಗಳಲ್ಲಿ ಬಿ.ಟೆಕ್ ಡೇರಿ ಟೆಕ್ನಾಲಜಿ ಮಾಡಿದ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ.

ಡೇರಿ ತಂತ್ರಜ್ಞಾನ ಕೋರ್ಸ್ಗಳ ಪಠ್ಯಕ್ರಮವು ಹಾಲು ಉತ್ಪಾದನೆ ನಿರ್ವಹಣೆ ಮತ್ತು ಡೇರಿ ಅಭಿವೃದ್ಧಿ, ಡೇರಿ ಪ್ರಕ್ರಿಯೆ ಎಂಜಿನಿಯರಿಂಗ್, ಚೀಸ್ ಮತ್ತು ಆಹಾರ ಎಂಜಿನಿಯರಿಂಗ್, ಡೇರಿ ಉತ್ಪನ್ನಗಳ ಪ್ಯಾಕಿಂಗ್ ವಿಷಯ ಒಳಗೊಂಡಿದೆ.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 4 ವರ್ಷದ ಬಿ.ಟೆಕ್ ಕೋರ್ಸ್ ಆಯ್ಕೆಮಾಡಬಹುದು. ಬಿ.ಟೆಕ್ ಡೇರಿ ಟೆಕ್ನಾಲಜಿಯ ಅರ್ಹತೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ 50 ರಿಂದ 60 ಅಂಕಗಳೊಂದಿಗೆ 12ನೇ ತರಗತಿಯನ್ನು ಪೂರ್ಣಗೊಳಿಸಬೇಕು. ಡೇರಿ ತಂತ್ರಜ್ಞಾನ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆಯು 12ನೇ ತರಗತಿಯ ಅರ್ಹತೆ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಆಧರಿಸಿದೆ.

ಡೇರಿ ತಂತ್ರಜ್ಞಾನ ಕೋರ್ಸ್ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ಹಾಲು ಸಂಸ್ಕರಣಾ ಘಟಕಗಳು, ಡೇರಿ ಉತ್ಪನ್ನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಗಳನ್ನು ಹುಡುಕಬಹುದು. ಆಹಾರ ಗುಣಮಟ್ಟ ನಿಯಂತ್ರಣ ಅಧಿಕಾರಿ, ಆಹಾರ ವಿತರಣಾ ಅಧಿಕಾರಿ, ಡೇರಿ ಸಂಶೋಧಕ, ಡೇರಿ ತಾಂತ್ರಿಕ ಅಧಿಕಾರಿ ಮತ್ತು ಡೇರಿನ್ಯೂಟ್ರಿಷನಿಸ್ಟ್ ಎಂಬ ಜನಪ್ರಿಯ ಉದ್ಯೋಗಗಳನ್ನು ಒಳಗೊಂಡಿವೆ.

ಎನ್ಇಪಿ 2020ರ ನಂತರ 4 ವರ್ಷದ ಕೋರ್ಸ್ನಲ್ಲಿ ಮೊದಲ ಪೂರೈಸಿದರೆ ಸರ್ಟಿಫಿಕೇಟ್ ಕೋರ್ಸ್ ಅರ್ಹತಾ ಪತ್ರ, 2 ವರ್ಷ ಪೂರೈಸಿದವರಿಗೆ ಡಿಪ್ಲೊಮಾ ಪ್ರಮಾಣ ಪತ್ರ, 4 ವರ್ಷ ಕೋರ್ಸ್ ಪೂರೈಸಿದವರಿಗೆ ಪದವಿ ಪ್ರಮಾಣ ಪತ್ರ ಸಿಗಲಿದೆ. ಆರಂಭಿಕವಾಗಿ ಶಿಷ್ಯವೇತನದೊಂದಿಗೆ ತರಬೇತಿ ಪಡೆಯಬಹುದು. ಬಿ.ಟೆಕ್ ನಂತರ 2 ವರ್ಷದ ಎಂ. ಟೆಕ್ ಸ್ನಾತಕೋತ್ತರ ಪದವಿಯನ್ನು ಮಾಡಲು ಅವಕಾಶವಿದೆ. ಇಲ್ಲಿ ಡೇರಿ ಇನ್ ಮೈಕ್ರೊಬಯೊಲಜಿ, ಎಂಜಿನಿಯರಿಂಗ್, ಕೆಮಿಸ್ಟ್ರಿ, ಟೆಕ್ನಾಲಜಿ ವಿಷಯಗಳಲ್ಲಿ ಪರಿಣಿತಿ ಪಡೆಯಬಹುದು. ನಂತರ ಪಿಎಚ್.ಡಿ ಮಾಡಲು ಅವಕಾಶವಿದೆ.

ಬಹುಬೇಡಿಕೆ ಇರುವ ಡೇರಿ ಕೋರ್ಸ್ಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆ. ಇದರ ಬಗ್ಗೆ ಇರುವ ಮಾಹಿತಿ ಕೊರತೆಯಿಂದ ವಿದ್ಯಾರ್ಥಿಗಳು ಹಿಂದೆ ಸರಿಯುತ್ತಾರೆ
ಡಾ. ಎಸ್.ಬಿ ಪಾಟೀಲ ಡೀನ್ ಕಾಲೇಜ್ ಆಫ್ ಡೈರಿ ಸೈನ್ಸ್ ಅಂಡ್ ಟೆಕ್ನಾಲಜಿ ಹಿಸಾರ್ ಹರಿಯಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.