ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟದಿಂದ ಶಿವಾನಂದ ಪಾಟೀಲ ವಜಾಗೊಳಿಸಲು ಒತ್ತಾಯ: ರೈತರ ಪ್ರತಿಭಟನೆ

Published 26 ಡಿಸೆಂಬರ್ 2023, 15:52 IST
Last Updated 26 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಕಲಘಟಗಿ: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಅವರನ್ನ ಕೂಡಲೇ ಸಚಿವ ಸಂಪುಟದಿಂದ ವಜಾಗೊಳ್ಳಿಸಬೇಕು ಎಂದು ಜಿಲ್ಲಾ ಕಬ್ಬು ಬೆಳೆಗರಾರ ಸಂಘದ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಒತ್ತಾಯಿಸಿದರು.

ಮಂಗಳವಾರ ಜಿಲ್ಲಾ ಕಬ್ಬು ಬೆಳೆಗರಾರ ಸಂಘದಿಂದ ಪಟ್ಟಣದ ಹುಬ್ಬಳ್ಳಿ–ಕಾರವಾರ ರಾಷ್ಟ್ರಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದರು.

‘ಬರಗಾಲದ ಬವಣೆಯ ಸಂಕಷ್ಟದಲ್ಲಿ ರೈತರು ಕಾಲ ಕಳೆಯುತ್ತಿದ್ದು ಬೆಳೆ ಸರಿಯಾಗಿ ಬಾರದೇ ಜೀವನ ಸಾಗಿಸಲು ಕಷ್ಟಕರವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆಯಾಗದೆ ಬರಗಾಲ ಆವರಿಸಿ ಬೆಳೆ ಸಾಲ ತುಂಬಲಾಗದೆ ದಿಕ್ಕು ತೋಚದಂತಾಗಿದೆ. ದೇಶಕ್ಕೆ ಅನ್ನ ನೀಡುವ ರೈತ ಮಳೆ ಚೆನ್ನಾಗಿ ಸುರಿದು ಉತ್ತಮ ಪಸಲು ಬರಲಿ ಎಂದು ಬಯಸುತ್ತಾರೆಯೇ ಹೊರತು ಬರವನ್ನು ಬಯಸುವುದಿಲ್ಲ’ ಎಂದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪ್ಪಾಧ್ಯಕ್ಷ ಉಳವಪ್ಪ ಬಳಿಗೇರ ಮಾತನಾಡಿ, ‘ಸಚಿವರಿಗೆ ಬರ ಬಂದಿರಬಹುದು. ಅದಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇವರ ಉಡಾಪೆ ಮಾತು ಸಹಿಸಲಾಗದು. ಸಚಿವರು ರೈತರ ಕ್ಷೇಮೆ ಯಾಚಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಡಾಕಪ್ಪನವರ, ಶಿವಪ್ಪ ತಡಸ, ಬಸಪ್ಪ ಹುಗ್ಗಿ, ಮೂರಸಾವಿರಪ್ಪ, ಶಂಕರಗೌಡ ಪಾಟೀಲ್, ನಿಂಗಪ್ಪ ತಾವರಗೇರಿ ಹಾಗೂ ಮಹಿಳಾ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT