ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕಲಾವಿದರಿಗೆ ₹5 ಸಾವಿರ ಮಾಸಾಶನಕ್ಕೆ ಒತ್ತಾಯ

Published 26 ಡಿಸೆಂಬರ್ 2023, 15:19 IST
Last Updated 26 ಡಿಸೆಂಬರ್ 2023, 15:19 IST
ಅಕ್ಷರ ಗಾತ್ರ

ಧಾರವಾಡ: ‘ಕಲಾವಿದರಿಗೆ ₹5 ಸಾವಿರ ಮಾಸಾಶನ ನೀಡಬೇಕು’ ಎಂದು  ಮುಖಂಡ ಆರ್.ಎಂ. ದರಗದ ಒತ್ತಾಯಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಬ್ರಾಹಿಂ ಸುತಾರ ಸಾಮರಸ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜನಪದ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಲೆಯನ್ನು ಎಲ್ಲರೂ ಪ್ರೀತಿಸುತ್ತಾರೆ. ಆದರೆ, ಕಲಾವಿದರ ಕಷ್ಟಗಳನ್ನು ಅರಿತುಕೊಳ್ಳವರಿಲ್ಲ. ಅವರನ್ನು ಬಳಸಿಕೊಂಡು ನಂತರ ನಿಷ್ಕಾಳಜಿ ತೋರುತ್ತಾರೆ’ ಎಂದು ಬೇಸರ ವಕ್ತಪಡಿಸಿದರು.

ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ‘ಸಂಗೀತಕ್ಕೆ ಅಗಾಧ ಶಕ್ತಿ ಇದೆ. ಅದು ಎಲ್ಲರನ್ನು ತಲುಪುತ್ತದೆ’ ಎಂದರು.  

ಸುಮತಿಶ್ರೀ, ನವಲಿಹಿರೇಮಠ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ ಹಳವದ, ಅಣ್ಣಪ್ಪ ದೇಸಾಯಿ, ರೈತ ಮುಖಂಡ ಯಮನೂರ ನಧಾಪ ಮುದಗಲ್, ಪ್ರಕಾಶ ಮಲ್ಲಿಗವಾಡ, ಶಿವ ಬಿದರಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT