ಹುಬ್ಬಳ್ಳಿ/ಬೆಳಗಾವಿ: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆ ಪ್ರಕ್ರಿಯೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವ ಬದಲು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.

‘ಮುಸುಕುಧಾರಿ ದೂರುದಾರ ಬುರುಡೆ ತಂದು ದೂರು ನೀಡಿದಾಗಲೇ, ಆತನನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಮುಸುಕುಧಾರಿ ಮತ್ತು ಯೂಟ್ಯೂಬರ್ಗಳ ಮಾತುಗಳನ್ನು ನಂಬಿ, ಸರ್ಕಾರವು ಎಸ್ಐಟಿ ತನಿಖೆಗೆ ಕ್ರಮ ತೆಗೆದುಕೊಂಡು ಬೌದ್ಧಿಕ ದಿವಾಳಿತನ ಪ್ರದರ್ಶಿಸಿತು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಒಟ್ಟಾರೆ ಈ ಪ್ರಕರಣದಲ್ಲಿ ಹಿಂದೂ ವಿರೋಧಿ ಕಾಣದ ಕೈಗಳ ಕೈವಾಡವಿದೆ. ಎಡಪಂಥೀಯರು ಮತ್ತು ಸರ್ಕಾರದಲ್ಲಿ ಇರುವಂತಹವರೇ ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ. ಇದು ಹಿಂದೂ ಧಾರ್ಮಿಕ ಕ್ಷೇತ್ರದ ಮೇಲೆ ನಡೆದ ಪ್ರಾಯೋಜಿತ ದಾಳಿ’ ಎಂದು ಅವರು ಆರೋಪಿಸಿದರು.

ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ‘ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಅಪಖ್ಯಾತಿ ತರಲು ಎಡಪಂಥೀಯರು ಸೇರಿ ಕೆಲವರು ಪ್ರಯತ್ನ ನಡೆಸಿದ್ದಾರೆ. ಎಸ್ಐಟಿ ರಚನೆ ಮತ್ತು ತನಿಖೆಗಾಗಿ ಸರ್ಕಾರ ಸಾಕಷ್ಟು ಹಣ ವ್ಯಯಿಸಿದೆ. ಆದರೆ, ಅವರಿಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಎಸ್ಐಟಿಯವರು ತನಿಖೆ ನಿಲ್ಲಿಸಲು ಬಯಸಿದರೂ ಎಡಪಂಥೀಯರು ಮತ್ತು ಸಿದ್ದರಾಮಯ್ಯ ಆಪ್ತರು ಬಿಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.