ಹುಬ್ಬಳ್ಳಿಯ ಆರ್ಟ್ಸ್ ಕಾಲೇಜಿನಿಂದ ತೋಳನಕೆರೆ ಸಂಪರ್ಕಿಸುವ ಟೆಂಡರ್‌ಶೂರ್ ರಸ್ತೆಯ ಬೀದಿದೀಪ ಕಂಬಗಳಿಗೆ ಕಟ್ಟಿರುವ ಕೇಸರಿ ಬಟ್ಟೆಗಳನ್ನು ಎರಡು ತಿಂಗಳಾದರೂ ತೆರವುಗೊಳಿಸಲಾಗಿಲ್ಲ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬ್ಯಾನರ್ ಕೇಬಲ್‌ಗಳಲ್ಲಿ ಪಕ್ಷಿಗಳು ಸಿಲುಕಿಕೊಂಡು ಸಾವಿಗೀಡಾಗುತ್ತಿವೆ. ಮೊಳೆ ಹೊಡೆಯುವುದು ಬ್ಯಾನರ್ ಕಟ್ಟುವುದರಿಂದ ವೃಕ್ಷಮಾತೆಗೂ ಹಾನಿ. ಈ ಬಗ್ಗೆ ಜನರು ಚಿಂತನೆ ಮಾಡಬೇಕು.
– ವೀರಪ್ಪ ಅರಕೇರಿ, ಅಕ್ಕ ಫೌಂಡೇಷನ್ ಅಧ್ಯಕ್ಷ
ನಗರದಾದ್ಯಂತ ಅಳವಡಿಸಿರುವ ಬಹುತೇಕ ಬ್ಯಾನರ್‌ಗಳ ಅವಧಿ ಮುಗಿದಿವೆ. ನಗರದಲ್ಲಿನ ಕಾನೂನು ಬಾಹಿರ ಬ್ಯಾನರ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.