ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

ಹಸಿದ ಹೊಟ್ಟೆ ತುಂಬಿಸುವ ಜಿವಿಎಸ್: ಪ್ರತಿದಿನ 100 ಜನರಿಗೆ ಮಧ್ಯಾಹ್ನ ಉಚಿತ ಊಟ

Published : 26 ಜುಲೈ 2025, 5:50 IST
Last Updated : 26 ಜುಲೈ 2025, 5:50 IST
ಫಾಲೋ ಮಾಡಿ
Comments
ಯಾರೂ ಹಸಿವಿನಿಂದ ಕೊರಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ 10 ಕಡೆಗಳಲ್ಲಿ ಹಸಿದವರಿಗೆ ಉಚಿತವಾಗಿ ಊಟ ಕೊಡುವ ಯೋಜನೆ ಇದೆ
ಜಗದೀಶ ಶೇಖರ್ ನಾಯ್ಕ ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ
‘ಸಾರ್ವಜನಿಕರ ಸಹಭಾಗಿತ್ವ’
‘ಹಸಿದವರಿಗೆ ಉಚಿತವಾಗಿ ಊಟ ನೀಡುವ ಕಾರ್ಯ ಹಲವರು ಮೆಚ್ಚುಗೆ ಸೂಚಿಸಿ ಧನಸಹಾಯಕ್ಕೆ ಮುಂದಾಗುತ್ತಾರೆ. ಜನ್ಮದಿನಾಚರಣೆ ವಿವಾಹ ವಾರ್ಷಿಕೋತ್ಸವ ಸೇರಿದಂತೆ ಇನ್ನಿತರ ಶುಭ ಸಂದರ್ಭಗಳಲ್ಲಿಯೂ ಕೆಲವರು ಊಟ ಸಿಹಿ ವಿತರಿಸಲು ಹಣ ನೀಡಲು ಬರುತ್ತಾರೆ. ಆದರೆ ಅವರಿಂದ ಹಣ ಪಡೆಯದೆ ನಾವು ಕೊಡುವ 100 ಊಟದ ಜೊತೆಗೇ ತಮ್ಮಿಂದ ಸಾಧ್ಯವಾದಷ್ಟು ಜನರಿಗೆ ಊಟ ನೀಡುವಂತೆ ತಿಳಿಸುತ್ತೇವೆ. ಕೆಲವರು ಊಟ ನೀಡಿದರೆ ಇನ್ನೂ ಕೆಲವರು ಸಿಹಿ ವಿತರಿಸುತ್ತಾರೆ. ಕೆಲವರು ಸ್ವಪ್ರೇರಣೆಯಿಂದ ಬಂದು ನಾವು ತಂದ ಊಟ ಬಡಿಸುವ ಮೂಲಕ ಸೇವೆ ಮಾಡುತ್ತಾರೆ’ ಎಂದು ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ ಜಗದೀಶ ಶೇಖರ್ ನಾಯ್ಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಗ್ರಾಮ ವಿಕಾಸ ಸಂಸ್ಥೆಯ ಸೇವೆಯಿಂದ ಪ್ರಭಾವಿತರಾದ ಅನೇಕ ಜನರು ತಮ್ಮ ಕೈಲಾದಷ್ಟು ಜನರಿಗೆ ಊಟ ನೀಡುತ್ತಾ ಬಂದಿದ್ದಾರೆ. ತಾವೂ ಕೈಜೋಡಿಸಬಹುದು ಹಸಿದ ಹೊಟ್ಟೆಗಳಿಗೆ ಹೊತ್ತು ಊಟ ನೀಡಬಹುದು. ಸಹಾಯ ನೀಡಬಯಸುವವರು ಮೊ: 70222 55555 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT