ಧಾರವಾಡ: ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲ ಪುಷ್ಪ ಪ್ರದರ್ಶನ ಕೃಷಿ ಮೇಳದ ಆಕರ್ಷಣೆಗಳಲ್ಲೊಂದಾಗಿದೆ. ಕೇಂದ್ರದಲ್ಲಿ ಪ್ರವೇಶ ದ್ವಾರದಲ್ಲಿನ ನವಿಲಿನ (15 ಅಡಿ ಎತ್ತರ) ಕಲಾಕೃತಿ, ಸುತ್ತಲೂ ಆಲಂಕಾರಿಕ ಪುಷ್ಪಗಳ ಸಿಂಗಾರ ವಿಶಿಷ್ಟವಾಗಿವೆ.

ಸೇವಂತಿಗೆ, ಕೆಂಪು, ಬಿಳಿ ಮತ್ತು ಹಳದಿ ಗುಲಾಬಿ, ಜರ್ಬೆರಾ, ಚೆಂಡು ಹೂವು, ಸುಗಂಧಿ, ಬಟನ್ ಗುಲಾಬಿ, ಹೆಲಿಕೊನಿಯಾ, ಯೋಲಸ್, ಡಚ್ ಫ್ಲವರ್, ಆರ್ಕಿಡ್, ಸೂರ್ಯಕಾಂತಿ ಹೂಗಳನ್ನು ಬಳಸಿ ತರೇಹವಾರಿ ಹೂಗುಚ್ಛಗಳನ್ನು ತಯಾರಿಸಲಾಗಿದೆ. 35ಕ್ಕೂ ಹೆಚ್ಚು ಬಗೆಯ ಹೂಗಳನ್ನು ಪ್ರದರ್ಶಿಸಲಾಗಿದೆ. ಆಲಂಕಾರಿಕ ಸಸ್ಯಗಳನ್ನು ಪರಿಚಯಿಸಲಾಗಿದೆ.

‘ಹೂವುಗಳು ಬಾಡದಂತೆ, ಹಾಳಾಗದಂತೆ ರಾಸಾಯನಿಕ ಸಿಂಪಡಿಸಲಾಗುವುದು. ನಾಲ್ಕು ದಿನಗಳವರೆಗೂ ಪುಷ್ಪಗಳು ತಾಜಾ ಆಗಿ ಉಳಿಯುವಂತೆ ವ್ಯವಸ್ಥೆ ಮಾಡಲಾಗಿದೆ‘ ಎಂದು ತೋಟಗಾರಿಕೆ ವಿಭಾಗದ ಪ್ರೊ.ವೇಣುಗೋಪಾಲ ಸಿ.ಕೆ.`ಪ್ರಜಾವಾಣಿ’ಗೆ ತಿಳಿಸಿದರು.

ಇಟಾಲಿಯನ್ ಲಿಂಬು, ಗಾಂಧಾರಿ ಮೆಣಸು, ಲಕ್ಷಣ ಫಲ, ಹನುಮನ ಫಲ, ಕರಮಾದಲ ಕಾಯಿ, ಕಿವಿ ಹಣ್ಣು, ಬಸಳೆ ಸೊಪ್ಪು, ಡಯಸ್ಕೋರಿಯಾ ಗಡ್ಡೆ, ಕುಮಟಾ ಸಿಹಿ ಈರುಳ್ಳಿ, ಗೋಕರ್ಣ ಬೆಂಡೆಕಾಯಿ, ಜುಮ್ಮಿನಕಾಯಿ, ಡ್ರ್ಯಾಗನ್, ಚೆರ್ರಿ, ನಿಲೆ ಬೇರು, ಕರಿ ಅರಿಸಿಣ, ಬದನೆಕಾಯಿ ಸಹಿತ ವಿವಿಧ ಹಣ್ಣು ಹಾಗೂ ತರಕಾರಿಗಳ ಬಗ್ಗೆ ಜನರು ಮಾಹಿತಿ ಪಡೆದರು.

ಸೋರೆಕಾಯಿ, ಬಾಟಲ್ನೆಕ್ ಸ್ವಾಷ್, ಹಳದಿ, ಹಸಿರು ಹಾಗೂ ಕಂದು ಬಣ್ಣದ ಡೊಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಪೇರಲ, ಬೂದುಕುಂಬಳ, ಬದನೆಕಾಯಿ, ಹೀರೇಕಾಯಿ, ಬಾಳೆಹಣ್ಣು, ಹಾಗಲಕಾಯಿ, ಸೀತಾಫಲ, ರಾಮಫಲ, 60 ತಳಿಯ ಸಣ್ಣ ಆಕಾರದ(ಕುಬ್ಜ) ಆಲ, ಅರಳಿ, ಮಾವು, ಹುಣಸೆ, ಅತ್ತಿ ಸೇರಿದಂತೆ ಸಪ್ಲೇರಾ ಸಸ್ಯಗಳು, ತೆಂಗಿನಕಾಯಿ ಗಣೇಶ ಸಹಿತ ಹಲವು ಕಲಾಕೃತಿಗಳು ಪ್ರದರ್ಶನದಲ್ಲಿ ಇವೆ.

ತೆಂಗಿನಕಾಯಿ ಗಣೇಶ ಸೇರಿದಂತೆ ಹಲವು ಕಲಾಕೃತಿಗಳು ಈ ಸಲದ ಕೃಷಿ ಮೇಳದ ವಿಶೇಷಗಳಾಗಿವೆ. ಫಲಪುಷ್ಪ ಪ್ರದರ್ಶನ ಮಳಿಗೆ ದ್ವಾರದಲ್ಲಿ ಹಲವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೊಬೈಲ್ ಫೋನ್ಗಳಲ್ಲಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಕೃಷಿ ಮೇಳದ ಫಲಪುಷ್ಪ ಪ್ರದರ್ಶನ ಚನ್ನಾಗಿದೆ. ವಿವಿಧ ಬಗೆಯ ಪುಷ್ಪಗಳು ಹಾಗೂ ಅಲಂಕಾರಿಕ ವಸ್ತುಗಳ ಬಗ್ಗೆ ಮಾಹಿತಿ ತಿಳಿಯಿತು
ಸುನಿತಾ ಪಾಟೀಲ ಧಾರವಾಡ

ಬೀಜಾಭರಣಗಳ ಆಕರ್ಷಣೆ ಹೆಸರು

ಜೋಳ ಸೊಯಾಬೀನ್ ಗುಲಗಂಜಿ ಸೊರೆಕಾಯಿ ಕುಂಬಳಕಾಯಿ ಬಿನ್ಸ್ ಧಾನ್ಯಗಳ ಬೀಜಗಳನ್ನು ಬಳಸಿ ತಯಾರಿಸಿದ ನಾಟ್ಯರೂಪದ ಧಾನ್ಯಮಯ ಯಕ್ಷಗಾನ ಚಿತ್ರಗಳು ಗೋಧಿ-ಭತ್ತ ಬಳಸಿ ತಯಾರಿಸಿದ ಜಿಂಕೆ ಫೊಟೋ ಬೂದ ಕುಂಬಳ ಸೀತಾಫಲ ಅವರೇಕಾಳು ಸೋರೆಕಾಯಿ ಬೀಜಗಳಿಂದ ತಯಾರಿಸಿದ ಆಭರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ ಎಂದು ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ತನುಶ್ರೀ ಚೋಡಟ್ಟಿಯವರ ತಿಳಿಸಿದರು.

ಕಲ್ಲಂಗಡಿ ಫಲದಲ್ಲಿ ಕಲಾಕೃತಿಗಳು

ಕಲ್ಲಂಗಡಿ ಫಲದಲ್ಲಿ ರಚಿಸಿರುವ ವಿವಿಧ ಕಲಾಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿ ಇವೆ. ಗಣಪತಿ ಈಶ್ವರ ಬುದ್ಧ ಆಂಜನೇಯ ಶಿವಾಜಿ ಆನೆ ಸಿಂಹ ಮೀನು ರೈತ ಕುದುರೆ ವಿವೇಕಾನಂದ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಸಂಗೊಳ್ಳಿ ರಾಯಣ್ಣ ಹನುಮಾನ್ ಹಾಗೂ ಶಿವಾಜಿಯ ಕಲಾಕೃತಿಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.