ಧಾರವಾಡ: ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿಈಚೆಗೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಹೆಡ್ ಕಾನ್ಸ್ಟೆಬಲ್ ಎಂ.ಜಿ.ಸೈಯ್ಯದ್ನವರ್ ಹಾಗೂ ಕಾನ್ಸ್ಟೆಬಲ್ ಕೃಷ್ಣ ವಿಭೂತಿ ಅವರನ್ನು ಅಮಾನತುಗೊಳಿಸಲಾಗಿದೆ.

‘ಮುಂಜಾಗ್ರತೆ ವಹಿಸಿದ್ದರೆ ಪ್ರಕರಣ ನಡೆಯದಂತೆ ತಪ್ಪಿಸಬಹುದಿತ್ತು. ಮುಂಜಾಗ್ರತೆ ವೈಫಲ್ಯ ಕಾರಣಕ್ಕೆ ಹೆಡ್ ಕಾನ್ಸ್ಟೆಬಲ್ ಸೈಯ್ಯದ್ನವರ್ ಹಾಗೂ ಕಾನ್ಸ್ಟೆಬಲ್ ಕೃಷ್ಣ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.

ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಎರಡು ಓಣಿಗಳ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ ಸಂಗೀತ ವಿಚಾರದಲ್ಲಿ ಯುವಕರು ಜಗಳವಾಡುವ ಹಂತಕ್ಕೆ ತಲುಪಿದಾಗ ಪೋಲೀಸರು ಲಾಠಿ ಜಾರ್ಜ್ ಮಾಡಿದ ಘಟನೆ ಈಚೆಗೆ ನಡೆದಿತ್ತು. ಪ್ರಕರಣದ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕ್ರಮ ವಹಿಸಬೇಕು ಎಂದು ಬಿಜೆಪಿಯವರು, ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.