ಧಾರವಾಡ: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಐದನೇ ಬಾರಿಗೆ ಸ್ಪರ್ಧಿಸಿರುವ ಸಚಿವ ಪ್ರಲ್ಹಾದ ಜೋಶಿ ಅವರು ₹ 13.97 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಅವರಿಗೆ ಸ್ವಂತ ವಾಹನ ಇಲ್ಲ. ಜೋಶಿ ಅವರ ಬಳಿ 184 ಗ್ರಾಂ ಚಿನ್ನ 5 ಕೆ.ಜಿ ಬೆಳ್ಳಿ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಇದೆ. ಜೋಶಿ ಅವರ ಹೆಸರಿನಲ್ಲಿ ₹ 6.63 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ₹1.37 ಕೋಟಿ ಸಾಲ ಇದೆ. ಪತ್ನಿ ಜ್ಯೋತಿ ಅವರ ಒಟ್ಟು ಆಸ್ತಿಯ ಮೌಲ್ಯ ₹ 6.80 ಕೋಟಿ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ಘೋಷಿಸಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಜೋಶಿ ಅವರ ಒಟ್ಟು ಆಸ್ತಿ ಮೌಲ್ಯ ₹10.34 ಕೋಟಿ ಘೋಷಿಸಿಕೊಂಡಿದ್ದರು, ಈ ಸ್ಥಿರಾಸ್ತಿ ಮೌಲ್ಯ₹ 8.09 ಕೋಟಿ ಇತ್ತು, ಈ ಬಾರಿ ಸ್ಥಿರಾಸ್ತಿ ಮೌಲ್ಯ ₹ 11.24 ಕೋಟಿ ಘೋಷಿಸಿಕೊಂಡಿದ್ದಾರೆ. ಕಳೆದ ಬಾರಿ ಪತ್ನಿ ಜ್ಯೋತಿ ಅವರ ಚರಾಸ್ತಿ ಮೌಲ್ಯ ₹ 27 ಲಕ್ಷ ಘೋಷಿಸಿಕೊಂಡಿದ್ದರು, ಈ ಬಾರಿ ₹ 5.93 ಕೋಟಿ ಘೋಷಿಸಿಕೊಂಡಿದ್ದಾರೆ. ಹಿಂದಿನ ಬಾರಿ ಜೋಶಿ ಅವರು ₹ 5.15 ಕೋಟಿ ಸಾಲ ಹಾಗೂ ಪತ್ನಿ ಹೆಸರಿನಲ್ಲಿ ₹2ಲಕ್ಷ ಸಾಲ ಘೋಷಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.