ಧಾರವಾಡದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ರ್ಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಭುವನೇಶ ಪಾಟೀಲ ಅವರು ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಸಂಘಕ್ಕೆ ಸಾಲ ಮಂಜೂರಾತಿ ಪತ್ರ ವಿತರಿಸಿದರು
‘ಸ್ಥಳೀಯ ಭಾಷೆಗೆ ಆದ್ಯತೆ ನೀಡಿ’
‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ವಿಲೀನಗೊಂಡ ನಂತರ ಸಮಸ್ಯೆಗಳು ಹೆಚ್ಚಾಗಿ ರೈತರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಬೇಕು’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು. ‘ಬಹುತೇಕ ರೈತರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ತಿಳಿಯಲ್ಲ. ಬ್ಯಾಂಕ್‌ನವರು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ವ್ಯವಸ್ಥಾಪಕರಿಗೆ ಕನ್ನಡ ತಿಳಿಯದಿದ್ದರೆ ಸ್ಥಳೀಯ ಸಿಬ್ಬಂದಿ ಅವರ ಜತೆಗಿದ್ದು ರೈತರಿಗೆ ಸ್ಪಂದಿಸಬೇಕು’ ಎಂದರು.