ಹುಬ್ಬಳ್ಳಿ: ನೀರು ಪೂರೈಕೆಯಲ್ಲಿನ ನಿರಂತರ ವ್ಯತ್ಯಯದಿಂದಾಗಿ ಅವಳಿನಗರದಲ್ಲಿ ಇಂದಿಗೂ ಟ್ಯಾಂಕರ್ ನೀರನ್ನು ಅವಲಂಬಿಸುವ ಅನಿವಾರ್ಯ ಇದೆ. ಹಳೇ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್.ಎಂ. ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ ಸೇರಿದಂತೆ ವಿವಿಧೆಡೆ ಕನಿಷ್ಠ 3 ದಿನಗಳಿಂದ 7 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸದಿರುವುದರಿಂದ, ಆ ಪ್ರದೇಶಗಳ ಜನ ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ. ಹುಬ್ಬಳ್ಳಿಯಲ್ಲಿ ಒಟ್ಟು 18 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 6 ಸಾವಿರ ಲೀಟರ್‌ನ ಒಂದು ಟ್ಯಾಂಕರ್‌ಗೆ ₹550 ಹಾಗೂ 3 ಸಾವಿರ ಲೀಟರ್ ಟ್ಯಾಂಕರ್‌ಗೆ ₹350 ದರ ನಿಗದಿ ಮಾಡಲಾಗಿದೆ.

ತಿಂಗಳಿಗೆ ಗರಿಷ್ಠ ₹20 ಲಕ್ಷ ವೆಚ್ಚ: ನಗರದಲ್ಲಿ ಟ್ಯಾಂಕರ್ ನೀರು ಪೂರೈಸಲು ತಿಂಗಳಿಗೆ ಸುಮಾರು ₹20 ಲಕ್ಷದವರೆಗೆ ವೆಚ್ಚ ಮಾಡಲಾಗುತ್ತಿದೆ. ವಾರ್ಷಿಕ ₹2.5 ಕೋಟಿಗೂ ಹೆಚ್ಚು ಮೊತ್ತವನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ. ಆದರೂ, ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ಜಲಮಂಡಳಿ ಪ್ರಕಾರ, ಪಾಲಿಕೆ ವ್ಯಾಪ್ತಿಯಲ್ಲಿ 1,200 ಕೊಳವೆಬಾವಿಗಳಿವೆ. ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ, ಇದೀಗ ಕೊಳವೆಬಾವಿಗಳನ್ನು ಕೊರೆಯುವುದಕ್ಕೆ ಕಡಿವಾಣ ಹಾಕಲಾಗಿದೆ.

ಕ್ಯಾನ್ ನೀರು ಪೂರೈಕೆ: ಹಲವೆಡೆ ಟ್ಯಾಂಕರ್ ನೀರು ಕೂಡ ಸಕಾಲದಲ್ಲಿ ಪೂರೈಕೆಯಾಗದಿರುವುದರಿಂದ ಜನ ಕುಡಿಯುವುದಕ್ಕಾಗಿ ಕ್ಯಾನ್ ನೀರು ಬಳಸುತ್ತಿದ್ದಾರೆ. ಅವಳಿನಗರದಲ್ಲಿ ನಿತ್ಯ ಸುಮಾರು 12 ಸಾವಿರ ನೀರಿನ ಕ್ಯಾನ್‌ಗಳು ಮಾರಾಟವಾಗುತ್ತಿವೆ. 20 ಲೀಟರ್‌ನ ಒಂದು ಕ್ಯಾನ್ ನೀರಿಗೆ ಕನಿಷ್ಠ ₹40 ಕೊಟ್ಟು ಖರೀದಿಸಬೇಕಿದೆ.

‘ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ವಿವಿಧ ಬ್ರ್ಯಾಂಡ್‌ನ ನೀರಿನ ಕ್ಯಾನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ವಿಕಾಸ್ ಎಂಟರ್‌ಪ್ರೈಸಸ್‌ನ ವಿಕಾಸ ಅಂಕೋಲ.

‘ಸದ್ಯ ಇರುವ ನೀರು ಪೂರೈಕೆಯ ಒಟ್ಟಾರೆ ವ್ಯವಸ್ಥೆಯನ್ನು ಎಲ್ ಆ್ಯಂಡ್ ಟಿ ಸಂಸ್ಥೆ ವಹಿಸಿಕೊಳ್ಳಲಿದೆ. ಎಲ್ಲೆಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.