ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂಬಾಕು ತಿಂದರೆ ಹಣ ಕೊಟ್ಟು ರೋಗ ಖರೀದಿಸಿದಂತೆ: ವೀಣಾ

Published 31 ಮೇ 2024, 14:17 IST
Last Updated 31 ಮೇ 2024, 14:17 IST
ಅಕ್ಷರ ಗಾತ್ರ

ಕುಂದಗೋಳ: ‘ತಂಬಾಕು ತಿನ್ನುವುದು ಎಂದರೆ ದುಡ್ಡು ಕೊಟ್ಟು ರೋಗ ಖರೀದಿಸಿದಂತೆ. ತಂಬಾಕಿನ ಪೊಟ್ಟಣದ ಮೇಲೆ ಎಚ್ಚರಿಕೆ ಇದ್ದರೂ ಜನರು ಬೇಜವಾಬ್ದಾರಿಯಿಂದ ತಿನ್ನುತ್ತಿದ್ದಾರೆ’ ಎಂದು ಧಾರವಾಡದ ತಂಬಾಕು ನಿರ್ಮೂಲನಾ ಕೋಶದ ಕಾರ್ಯಕರ್ತೆ ವೀಣಾ ಎನ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಉದ್ದೇಶಿಸಿ ಅವರು ಮಾತನಾಡಿರು.

‘ತಂಬಾಕು ಸೇವನೆಯಿಂದ ಕ್ಯಾನ್ಸರ್ ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ಮಧುಮೇಹ, ತಲೆ ಕೂದಲು ಉದುರುವಿಕೆ, ದೃಷ್ಟಿ ಕ್ಷೀಣಿಸುವಿಕೆ, ಹೃದಯ ಸಂಬಂಧಿ ಕಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದಾನೆ’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ ಖಾದರ್, ಸಿವಿಲ್ ನ್ಯಾಯಾಧೀಶೆ ಗಾಯತ್ರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸೂಪಿಯಾ ದಾಸರಿ, ವಕೀಲ ಯು.ಎಂ. ಪಾಟೀಲ, ಎಸ್.ಎನ್. ತೊಂಡುರು, ಚಂದ್ರಕಲಾ ಪ್ರಭಾಕರ್, ಗೀತಾ ಜಿ., ವಿರೇಶ ಅಂಗಡಿ, ವೈ.ಎಂ ತಹಶೀಲ್ದಾರ್, ಜಿ.ಬಿ. ಸೊರಟೂರು ಇದ್ದರು.

ಕುಂದಗೋಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ‘ವಿಶ್ವ ತಂಬಾಕು ರಹಿತ ದಿನ’ ಆಚರಿಸಲಾಯಿತು
ಕುಂದಗೋಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ‘ವಿಶ್ವ ತಂಬಾಕು ರಹಿತ ದಿನ’ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT