ಬುಧವಾರ, ಅಕ್ಟೋಬರ್ 28, 2020
29 °C

ನಿವೃತ್ತ ಗ್ರಂಥಪಾಲಕರಿಗೆ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಕಾಲೇಜಿನ ಗ್ರಂಥಾಲಯದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಸ್.ಮಾಳವಾಡ ಅವರನ್ನು ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರೌಢಶಾಲೆಯ ಶಿಕ್ಷಕಿ ಪ್ರೇಮಾ ಎಸ್. ಕಳ್ಳಿಮನಿ ಹಾಗೂ ಚಿನ್ಮಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಗ್ರಂಥಪಾಲಕ ಚಂದ್ರಶೇಖರ ನಿಂ. ಚನ್ನಂಗಿ ಅವರು ಮಾತನಾಡಿ ‘ಮಾಳವಾಡ ಅವರು ಸದಾ ಕ್ರಿಯಾಶೀಲರಾಗಿ ತಮ್ಮ ಹತ್ತಿರ ಸಹಾಯಕ್ಕಾಗಿ ಬಂದವರಿಗೆ ನೆರವಾಗುತ್ತಿದ್ದರು. ತಮ್ಮ ವೃತ್ತಿಯ ಜೊತೆಗೆ ಉತ್ತಮ ಪ್ರವೃತ್ತಿ ರೂಢಿಸಿಕೊಳ್ಳಲು ಹೇಳುತ್ತಿದ್ದರು’ ಎಂದರು.

ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟನ ನಿರ್ದೇಶಕ ಡಾ. ಬಸವಕುಮಾರ ತಲವಾಯಿ, ಹುಬ್ಬಳ್ಳಿ ಶಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ ಕಾರ್ಯದರ್ಶಿ ಮೃತ್ಯುಂಜಯ ಮಟ್ಟಿ, ಜಾಗೃತ ಸಮಾಜ ನಿರ್ಮಾಣ ಟ್ರಸ್ಟ್‌ ಅಧ್ಯಕ್ಷ ಗುರುಪಾದ ಬ ಕರ್ಲಟ್ಟಿ, ಆನಂದ ಘಟಪನದಿ, ಗ್ರಂಥಪಾಲಕ ರವೀಂದ್ರ ಉಮ್ರಾಣಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು