ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿನ ಹೂವಿನ ಮಾರುಕಟ್ಟೆ ವಿಭಾಗದಲ್ಲಿ ಮಂಗಳವಾರ ಚೆಂಡು ಸೇವತಿಗೆ ಹೂವು ಮಾರಾಟ ನಡೆಯಿತು
ಜಿಲ್ಲೆಯಲ್ಲಿ ಸುಮಾರು 300 ಹೆಕ್ಟೇರ್‌ನಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಬೆಳೆ ಚೆನ್ನಾಗಿ ಬಂದಿದೆ. ಆದರೆ ಕಳೆದ ಬಾರಿಯಷ್ಟು ಬೆಲೆ ರೈತರಿಗೆ ಸಿಕ್ಕಿಲ್ಲ.
ಕಾಶೀನಾಥ ಭದ್ರಣ್ಣನವರ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ ಜಿಲ್ಲೆ
ಧಾರವಾಡ ತಾಲ್ಲೂಕಿನಲ್ಲಿ 135 ಹೆಕ್ಟೇರ್‌ನಲ್ಲಿ ಹೂವಿನ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 215 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೂವುಗಳ ಬೆಳೆ ಚೆನ್ನಾಗಿ ಬಂದಿದೆ. ಬೆಲೆಯಲ್ಲಿ ಏರಿಳಿತವಾಗುತ್ತಿದೆ
ಇಮ್ತಿಯಾಜ್ ಚೆಂಗಾಪುರ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ.