ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಛಿದ್ರಗೊಳಿಸಲು ಕಾದು ಕುಳಿತಿರುವ ವಿದೇಶಿ ಶಕ್ತಿಗಳು: ಎಸ್.ಎ. ರಾಮದಾಸ್

Published 10 ಜನವರಿ 2024, 9:05 IST
Last Updated 10 ಜನವರಿ 2024, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿದಂತೆ ಸುತ್ತಮುತ್ತ ಇರುವ ವಿದೇಶಿ ವ್ಯವಸ್ಥೆಗಳು ಭಾರತವನ್ನು ಛಿದ್ರಛಿದ್ರಗೊಳಿಸಲು ಕಾಯುತ್ತಿವೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇಂತಹ ಪರಿಸ್ಥಿತಿಯಲ್ಲಿ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗದಿದ್ದರೆ ಏನಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದರು.

'ಇಂತಹ ಸಮಯದಲ್ಲಿ ಏಕತೆ ಬಹಳ ಮುಖ್ಯ ಹೊರತು, ನಮ್ಮ ವಿಚಾರ, ನಮ್ಮ ಅಧಿಕಾರ ಮುಖ್ಯವಲ್ಲ' ಎಂದರು.

'ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಬಹಳಷ್ಟು ಕಡಿಮೆಯಾಗಿವೆ. ಅದಕ್ಕಿಂತ ಮುಂಚೆ ಯಾವ ಸ್ಥಿತಿ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ' ಎಂದು ನುಡಿದರು.

ಪಕ್ಷದಲ್ಲಿ ಕೆಲವರನ್ನು, ಕೆಲ ಸಂದರ್ಭಗಳಲ್ಲಿ ಕಡೆಗಣಿಸಿರುವುದು ನಿಜ. ಇದನ್ನು ಅಲ್ಲಗೆಳೆಯಲಾಗದು. ಅದನ್ನೆಲ್ಲ ಮೀರಿ, ಸರಿಪಡಿಸಿಕೊಂಡು ಹೋಗುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನ್ನನ್ನು ರಾಜಕಾರಣ ಬಿಟ್ಟು ಬೇರೆ ಕೆಲಸಗಳಿಗೆ ಪಕ್ಷ ಉಪಯೋಗಿಸಿ ಕೊಳ್ಳುತ್ತಿದೆ. ವಿಶ್ವಕರ್ಮ ಯೋಜನೆಯ ಉಸ್ತುವಾರಿಯನ್ನು ನನಗೆ ನೀಡಿದ್ದಾರೆ. ನನಗೆ ತೃಪ್ತಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT