ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕ್ಷೇತ್ರದಲ್ಲಾದರೂ ಮುಸ್ಲಿಮರಿಗೆ ಟಿಕೆಟ್ ಕೊಡಿ: ಐ.ಜಿ. ಸನದಿ

ಸಮುದಾಯದ ಮುಖಂಡರ ಸಭೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ ಒತ್ತಾಯ
Last Updated 31 ಜನವರಿ 2023, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಕ್ಷೇತ್ರದಲ್ಲಾದರೂ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ಕೊಡಬೇಕು’ ಎಂದು ಮಾಜಿ ಸಂಸದ ಐ.ಜಿ. ಸನದಿ ಒತ್ತಾಯಿಸಿದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಟಿಕೆಟ್ ಆಕಾಂಕ್ಷಿ ಸಿ.ಎಸ್. ಮೆಹಬೂಬ ಬಾಷಾ ಅಧ್ಯಕ್ಷತೆಯಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಏಳೂ ಕ್ಷೇತ್ರಗಳಲ್ಲಿ ಮುಸ್ಲಿಮರ ಜನಸಂಖ್ಯೆ 4 ಲಕ್ಷಕ್ಕೂ ಅಧಿಕವಿದ್ದು, ಒಂದೊಂದು ಕ್ಷೇತ್ರದಲ್ಲಿ ಸುಮಾರು 50 ಸಾವಿರ ಮಂದಿ ಇದ್ದಾರೆ. ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಪಕ್ಷಕ್ಕೆ ನಾವು ಒತ್ತಾಯಿಸುತ್ತಿದ್ದೇವೆ’ ಎಂದರು.

ಮುಖಂಡ ಅನ್ವರ ಮುಧೋಳ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿ.ಎಸ್. ಮೆಹಬೂಬ ಬಾಷಾ, ‘ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್‌ಗೆ ಅರ್ಜಿ ಹಾಕಿದ್ದೇನೆ. ಪಕ್ಷ ಅದನ್ನು ಪರಿಗಣಿಸಬೇಕು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಮುದಾಯದ ಒಬ್ಬರಿಗಾದರೂ ಟಿಕೆಟ್ ಕೊಡಬೇಕು’ ಎಂದು ಮನವಿ ಮಾಡಿದರು.

ಎಂ.ಎ. ಪಠಾಣ, ಬಾಬಾಜಾನ್ ಮುಧೋಳ, ಮಝರ್ ಖಾನ್, ಆಸಿಫ್ ಪಾಚಾಪುರ್, ಫಕ್ರುದ್ದೀನ್ ಗೊರವನ ಕೊಲ್ಲ, ಸಲೀಂ ಸುಂಡಿಕೆ, ಅಶ್ಪಾಕ ಕುಮಟಾಕರ, ರೆಹಮಾನ್ ಗೈಲೂಟ್, ಶಫಿ ಮುದ್ದೇಬಿಹಾಳ, ವಕೀಲ ಐ.ಕೆ. ಬೆಳಗಲಿ, ರೆಹ್ಮಾನ್ ತಲವಾಯಿ, ಎ.ಎಫ್. ರಶ್ಮಿ, ಉಸ್ಮಾನ್ ಬೆಂಗೇರಿ, ನವಾಬ್ ಜಾನ್ ಖಾಜಾ ನದಾಫ್, ಖಾಸೀಂ ಪಿಂಜಾರ, ಶಾರುಖ್ ಮುಲ್ಲಾ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT