ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿ’

Published : 26 ಸೆಪ್ಟೆಂಬರ್ 2024, 16:04 IST
Last Updated : 26 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments

ಗುಳೇದಗುಡ್ಡ: ‘ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂಬುದೇ ಶಿಕ್ಷಕರ ಮತ್ತು ಇಲಾಖೆಯ ಮುಖ್ಯ ಉದ್ದೇಶವಾಗಿದೆ’ ಎಂದು ಬಾದಾಮಿಯ ಬಿಇಒ ಬಿ.ಎಚ್. ಹಳಗೇರಿ ಹೇಳಿದರು.

ಅವರು ತಾಲ್ಲೂಕಿನ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2ನೇ ಹಂತದ ಪಿಎಂಶ್ರೀ ಯೋಜನೆಯಡಿ ಮಂಜೂರಾದ ಎಲ್‌ಕೆಜಿ ಹಾಗೂ ಇಪಿಐಎಂಟಿ ಯೋಜನೆಯಡಿ ಇಂಗ್ಲಿಷ್ ಮಾಧ್ಯಮದ 1ನೇ ತರಗತಿ  ಉದ್ಘಾಟಿಸಿ ಮಾತನಾಡಿದರು.

‘ಪಾಲಕರು ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸಿ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ ಶಾಲಾ ಮಕ್ಕಳಿಂದ ಹಾಗೂ ಶಿಕ್ಷಕರಿಂದ ತಯಾರಿಸಿದ ಕಲಿಕೋಪಕರಣ ಮೇಳದ ಕೊಠಡಿಯನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪರ್ವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ರಾಠೋಡ, ಸರ್ಕಾರಿ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ವಿ. ಜಾಧವ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕರಾದ ರವಿಚಂದ್ರ ಬೇನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಲಾಖಾ ಅನುಷ್ಠಾನ ಅಧಿಕಾರಿ ಎಂ.ಸಿ.ನಾಲತವಾಡ, ಭೀಮಶಿ ಕುಂಬಾರ, ಎಸ್.ಎಸ್.ಯಲಿಗಾರ, ಆರ್.ಎಂ.ಬಾಪಟ, ಶಾಲಾ ಶಿಕ್ಷಕರಾದ ಎಸ್.ಎಸ್.ಆಡಿನ, ಎಂ.ಎನ್. ಮುದಗಲ್, ಎನ್.ಎಲ್.ದಂಡಾವತಿ, ಎಲ್.ವಿ. ಚವ್ಹಾಣ, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT