ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಘಟಗಿ | ಗ್ರಾ.ಪಂ ಸದಸ್ಯನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Published 24 ನವೆಂಬರ್ 2023, 15:43 IST
Last Updated 24 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಕಲಘಟಗಿ: ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನ ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬಗಡಗೇರಿ ಗ್ರಾಮದ ಲಿಂಗರಾಜ್ ವೃತ್ತದಲ್ಲಿ ಬುಧವಾರ ಸಂಜೆ ಗ್ರಾ.ಪಂ ಸದಸ್ಯ ನಿಂಗಪ್ಪ ಬಸಪ್ಪ ದಾಸಪ್ಪನವರ ಕೊಲೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಕೊಲೆ ಆರೋಪಿಗಳಾದ ಗಿರಿಮಲ್ಲಪ್ಪ ದಂಡಿನ (60) ನಾಗಪ್ಪ ದಂಡಿನ (37) ಬಂಧಿತರು.

ನಾಗಪ್ಪ ದಂಡಿನ
ನಾಗಪ್ಪ ದಂಡಿನ

ತಮಗೆ ಆಸ್ತಿ ಸಿಗದಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ನಿಂಗಪ್ಪನ ಪತ್ನಿ ನಿಗಮ್ಮ ದಾಸಪ್ಪನವರ ಠಾಣೆಗೆ ದೂರು ನೀಡಿದ್ದರು.  ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT