2024–25ನೇ ಸಾಲಿನ ಮುಂಗಾರು ಹಂಗಾಮಿನ ಶೇಂಗಾವು 49582 ಕ್ವಿಂಟಲ್ ಶೇಂಗಾ ಆವಕವಾಗಿತ್ತು. ಈ ಬಾರಿ ಅ.15ರವರೆಗೆ 26541 ಕ್ವಿಂಟಲ್ ಶೇಂಗಾ ಆವಕವಾಗಿದೆ. ನವೆಂಬರ್ ಅಂತ್ಯದವರಿಗೂ ಆವಕವಿದೆ
- ಕೆ.ಎಚ್.ಗುರುಪ್ರಸಾದ್, ಎಪಿಎಂಸಿ ಕಾರ್ಯದರ್ಶಿ
ಜಿಲ್ಲೆಯಲ್ಲಿ ಮುಂಗಾರಿನ ಹಂಗಾಮಿನ ಶೇಂಗಾ ಆವಕ ನಿರೀಕ್ಷಿಸಿದಷ್ಟು ಬಂದಿಲ್ಲ. ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ವಿಂಟಲ್ ಶೇಂಗಾ (ಸಿಪ್ಪೆಸಹಿತ) ₹3500 ರಿಂದ ₹6800ರ ತನಕ ಮಾರಾಟವಾಗಿದೆ
ಮುರುಗೇಶ ಬಿ.ಕಬ್ಬೂರು, ಮರ್ಚಂಟ್, ಕಾಳುಕಡಿ ವಿಭಾಗ ಎಪಿಎಂಸಿ
ಶೇಂಗಾ ಬೆಳೆ ಕಾಳು ಕಟ್ಟುವ ವೇಳೆ ಹೆಚ್ಚು ಮಳೆ ಸುರಿಯಿತು. ನಾವು ನಿರೀಕ್ಷಿಸಿದಷ್ಟು ಇಳುವರಿ ಬರಲಿಲ್ಲ. ಗಟ್ಟಿ ಕಾಳು ಬಂದಿಲ್ಲ. ಬೆಳೆಗೆ ಖರ್ಚು ಮಾಡಿದ ಹಣ ಸಿಗುತ್ತಿಲ್ಲ
ಚನ್ನಪ್ಪಗೌಡ, ರೈತ, ಮಣಕವಾಡ ನವಲಗುಂದ ತಾಲ್ಲೂಕು.
ಹುಬ್ಬಳ್ಳಿಯ ಎಪಿಎಂಸಿಯ ಕಾಳುಕಡಿ ವಿಭಾಗದ ರಸ್ತೆಯಲ್ಲಿ ಶೇಂಗಾ ರಾಶಿಗಳನ್ನು ಹಾಕಿರುವುದು