ಗ್ರಾಮದ ಮೇಲ್ಮಟ್ಟದ ಜಲಾಗಾರ ಕೆಳಗಿರುವ ವಾಲ್‌ಗಳು ಮಲೀನ ನೀರಿನಲ್ಲಿ ಮುಳುಗಿವೆ
ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಪ್ರಯೋಗಾಲಯದ ವರದಿ
ನವಲಗುಂದ ಗುಡಿಸಾಗರ ಗ್ರಾಮದ ಮೇಲ್ಮಟ್ಟದ ಜಲಾಗಾರ ಕೆಳಗಿರುವ ವಾಲಗಳು ಮಲೀನ ನೀರಿನಲ್ಲಿ ಮುಳುಗಿರುವುದನ್ನು ಪರಿಶೀಲಿಸುತ್ತಿರುವ ನವಲಗುಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ

ಕೆರೆಯ ನೀರು ಕಲುಷಿತಗೊಂಡು ಗ್ರಾಮಸ್ಥರು ರೋಗಗಳಿಂದ ಬಳಲುವಂತಾಗಿದೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಆಡಳಿತದ ನಿರ್ಲಕ್ಷ್ಯದಿಂದ ಹೀಗಾಗಿದೆ
ವಿರಪಾಕ್ಷಗೌಡ ಕುಲಕರ್ಣಿ ಗ್ರಾಮಸ್ಥ
ಕೆರೆಯ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರ ದೂರಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು
ಭಾಗ್ಯಶ್ರೀ ಜಹಗೀರದಾರ ತಾ.ಪಂ ಇಒ