ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಗುರುರಾಯರ ಮಧ್ಯಾರಾಧನೆ: ಸಂಗೀತ ಸೇವೆ

Published 2 ಸೆಪ್ಟೆಂಬರ್ 2023, 14:11 IST
Last Updated 2 ಸೆಪ್ಟೆಂಬರ್ 2023, 14:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ನಗರದ ವಿವಿಧೆಡೆಯ ರಾಯರ ಮಂದಿರದಲ್ಲಿ ಮಧ್ಯಾರಾಧನೆ ಹಾಗೂ ಸಂಗೀತ ಭಜನೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.

ದೇಶಪಾಂಡೆ ನಗರದ ಶ್ರೀಕೃಷ್ಣಮಠದ ಶ್ರೀಗುರು ರಾಘವೇಂದ್ರ ಸ್ವಾಮಿಯ ಬೃಂದಾವನಕ್ಕೆ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಭವಾನಿ ನಗರ, ವಿದ್ಯಾನಗರ, ನೇಕಾರ ನಗರ, ಲಿಂಗರಾಜ ನಗರದ ರಾಘವೇಂದ್ರ ಸ್ವಾಮಿಗಳವರ ಬೃಂದಾವನದ ಆವರಣದಲ್ಲಿ ನೂರಾರು ಭಕ್ತರು ಸೇರಿ ಗುರುರಾಯರಿಗೆ ವಿಶೇಷ ಪೂಜೆಯೊಂದಿಗೆ ಪಲಂಚಾಮೃತ, ಪುಷ್ಪಾಲಂಕಾರ ಸೇವೆ ಸಲ್ಲಿಸಿದರು. ಸಂಜೆ ಡೋಲು, ವಾದ್ಯಗಳ ಸಂಗೀತವೂ ನಡೆಯಿತು.

ಶನಿವಾರ ಬೆಳಿಗ್ಗೆ ಭವಾನಿ ನಗರದ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ರಥೋತ್ಸವ ನಡೆಯಲಿದೆ.

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಗುರುರಾಯರ ಮಂದಿರದಲ್ಲಿ ಸ್ವಾಮಿಗೆ ಹೂವಿನಿಂದ ಅಲಂಕರಿಸಿರುವುದು
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಗುರುರಾಯರ ಮಂದಿರದಲ್ಲಿ ಸ್ವಾಮಿಗೆ ಹೂವಿನಿಂದ ಅಲಂಕರಿಸಿರುವುದು
ಹುಬ್ಬಳ್ಳಿಯ ನೇಕಾರ ನಗರದ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ರಾಯರ ಬೃಂದಾವನಕ್ಕೆ ಹೂವಿನಿಂದ ಅಲಂಕರಿಸಿರುವುದು
ಹುಬ್ಬಳ್ಳಿಯ ನೇಕಾರ ನಗರದ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ರಾಯರ ಬೃಂದಾವನಕ್ಕೆ ಹೂವಿನಿಂದ ಅಲಂಕರಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT