ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.3 ಲಕ್ಷ ಮೌಲ್ಯದ ಬ್ಯಾಗ್‌ ಮರಳಿಸಿದ ಚಾಲಕ ಹನುಮಂತಪ್ಪ

Last Updated 12 ಅಕ್ಟೋಬರ್ 2020, 15:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಬಿಆರ್‌ಟಿಎಸ್‌ ಬಸ್‌ನಲ್ಲಿ ಎರಡು ಲ್ಯಾಪ್‌ಟಾಪ್‌ ಮತ್ತು ನಗದು ಸೇರಿದಂತೆ ಒಟ್ಟು ₹1.3 ಲಕ್ಷ ಮೌಲ್ಯದ ಸಾಮಗ್ರಿ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಹುಬ್ಬಳ್ಳಿ ಘಟಕದ ಬಸ್ ಚಾಲಕ ಹನುಮಂತಪ್ಪ ವಿ. ವಡ್ಡರ ಬ್ಯಾಗ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಗಂಗಾವತಿಯಿಂದ ಬಂದಿದ್ದ ಪ್ರಯಾಣಿಕರೊಬ್ಬರು ಹಳೇ ಬಸ್‌ ನಿಲ್ದಾಣದಲ್ಲಿ ಬಸ್ ಏರಿ ಬಸ್‌ನಲ್ಲಿಯೇ ಬ್ಯಾಗ್ ಬಿಟ್ಟು ಶೌಚಾಲಯಕ್ಕೆ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬ್ಯಾಗ್ ಬಿಟ್ಟಿರುವುದನ್ನು ನೆನಪಿಸಿಕೊಂಡ ಅವರು ತಾವು ಏರಿದ್ದ ಬಸ್‌ಗಾಗಿ ಹುಡುಕಾಟ ನಡೆಸಲು ಧಾರವಾಡಕ್ಕೆ ಹೋಗಿದ್ದಾರೆ. ಪ್ರಯಾಣಿಕ ಗಾಬರಿಯಿಂದ ಬ್ಯಾಗ್‌ಗಾಗಿ ಮೂರ್ನಾಲ್ಕು ಬಸ್‌ಗಳಲ್ಲಿ ಹುಡುಕಿದ್ದಾನೆ. ಆಗ ಹನುಮಂತಪ್ಪ ಆ ಪ್ರಯಾಣಿಕಮನ್ನು ಕರೆದು ವಿಚಾರಿಸಿ, ಬ್ಯಾಗ್ ಅವರದ್ದೇ ಎನ್ನುವುದನ್ನು ಖಚಿತ ಪಡಿಸಿಕೊಂಡು ಅಧಿಕಾರಗಳ ಸಮ್ಮುಖದಲ್ಲಿ ವಾಪಸ್‌ ನೀಡಿದ್ದಾರೆ.

ಮೂರು ವರ್ಷಗಳಿಂದ ಇಲ್ಲಿನ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಹಿರೇಕೆರೂರು ತಾಲ್ಲೂಕಿನ ಮಾವಿನತೋಪು (ರಟ್ಟೀಹಳ್ಳಿ ಸಮೀಪ) ಗ್ರಾಮದವರು. ಒಂದು ವರ್ಷದ ಹಿಂದೆಯಷ್ಟೇ ಬಿಆರ್‌ಟಿಎಸ್‌ಗೆ ಬಂದಿದ್ದರು. ಇವರ ಪ್ರಾಮಾಣಿಕತೆಗೆ ಸಾರಿಗೆ ಘಟಕದ ನಿರ್ವಹಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT