ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಎಚ್‌ಸಿಎ

ಕ್ರಿಕೆಟ್: ನಾಕೌಟ್‌ನಲ್ಲಿ ಸ್ಥಾನಕ್ಕಾಗಿ 18ರಂದು ಮಹತ್ವದ ಹಣಾಹಣಿ
Last Updated 17 ಫೆಬ್ರುವರಿ 2021, 15:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತನ್ನ ಎರಡನೇ ಲೀಗ್‌ ಪಂದ್ಯದಲ್ಲಿ 132 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) 16 ವರ್ಷದ ಒಳಗಿನವರ ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತಕ್ರಿಕೆಟ್ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತು.

ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಎಚ್‌ಸಿಎ ನಾಕೌಟ್ ತಲುಪಿದ ಎರಡನೇ ತಂಡವಾಯಿತು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಚ್‌ಸಿಎ 30 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿತು. ಹರ್ಷ ಜಾಧವ್ (55), ಮಣಿಕಂಠ ಎಸ್‌. ಬುಕಿಟಗಾರ (46) ಮತ್ತು ಸಾಹಿಲ್‌ ಸೂರ್ಯವಂಶಿ (41) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು. ಸವಾಲಿನ ಮೊತ್ತ ಬೆನ್ನು ಹತ್ತಿದ ಎದುರಾಳಿ ಹುಬ್ಬಳ್ಳಿಯ ಚಾಂಪಿಯನ್ಸ್‌ ನೆಟ್ಸ್ ತಂಡ 24.1 ಓವರ್‌ಗಳಲ್ಲಿ 79 ರನ್‌ಗೆ ತನ್ನ ಹೋರಾಟ ಮುಗಿಸಿತು. ಎಚ್‌ಸಿಎ ತಂಡದ ಆದಿತ್ಯ ಎನ್‌.ಕೆ ನಾಲ್ಕು ವಿಕೆಟ್‌ ಕಬಳಿಸಿ ಮಿಂಚಿದರು.

ದಿನದ ಇನ್ನೊಂದು ಲೀಗ್‌ ಪಂದ್ಯದಲ್ಲಿ ಧಾರವಾಡದ ಎಸ್‌ಡಿಎಂ ಅಕಾಡೆಮಿ ತಂಡ ವಿಎಂಸಿಎ ವಿರುದ್ಧ ಏಳು ವಿಕೆಟ್‌ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ವಿಎಂಸಿಎ 27.4 ಓವರ್‌ಗಳಲ್ಲಿ 101 ರನ್‌ ಗಳಿಸಿತು. ಸುಲಭವಾದ ಗುರಿಯನ್ನು ಎಸ್‌ಡಿಎಂ 17.5 ಓವರ್‌ಗಳಲ್ಲಿ ತಲುಪಿ ನಾಕೌಟ್‌ ಪ್ರವೇಶಿಸುವ ಆಸೆ ಜೀವಂತವಾಗಿಟ್ಟುಕೊಂಡಿತು. ಈ ತಂಡದ ಪ್ರಜ್ವಲ್‌ ಎಚ್‌. ಶಿರೋಳ ನಾಲ್ಕು ವಿಕೆಟ್‌ ಕಬಳಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಹೀಗಿದೆ ನಾಕೌಟ್‌ ಲೆಕ್ಕಾಚಾರ

‘ಎ’ ಗುಂಪಿನಿಂದ ಎಚ್‌ಸಿಎ ನಾಕೌಟ್‌ ಪ್ರವೇಶಿಸಿದ್ದು, ಗುರುವಾರ ನಡೆಯುವ ಪಂದ್ಯದಲ್ಲಿ ಈ ತಂಡ ಎಸ್‌ಡಿಎಂ ವಿರುದ್ಧ ಪೈಪೋಟಿ ನಡೆಸಲಿದೆ. ಇದರಲ್ಲಿ ಎಚ್‌ಸಿಎ ಸೋತರೂ, ಗೆದ್ದರೂ ನಾಕೌಟ್‌ನಲ್ಲಿ ಉಳಿಯಲಿದೆ. ಸೆಮಿಫೈನಲ್‌ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಎಸ್‌ಡಿಎಂ ಗೆಲ್ಲಲೇಬೇಕಿದೆ. ಈ ಪಂದ್ಯದ ಫಲಿತಾಂಶದ ಆಧಾರದ ಮೇಲೆ ವಿಎಂಸಿಎ ತಂಡದ ನಾಕೌಟ್ ಭವಿಷ್ಯ ನಿರ್ಧಾರವಾಗಲಿದೆ.

‘ಬಿ’ ಗುಂಪಿನಿಂದ ಬಿಡಿಕೆ ಸೆಮಿಫೈನಲ್‌ ಪ್ರವೇಶಿಸಿದ್ದು, ತೇಜಲ್‌ ಅಕಾಡೆಮಿ ಟೂರ್ನಿಯಿಂದ ಹೊರಬಿದ್ದಿದೆ. ಕೊನೆಯ ಲೀಗ್‌ ಪಂದ್ಯದಲ್ಲಿ ಹುಬ್ಬಳ್ಳಿ ಕೋಲ್ಟ್ಸ್‌ ಮತ್ತು ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡಕ್ಕೆ ನಾಕೌಟ್‌ ರಹದಾರಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT