ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ: ಅಧಿಕಾರಿಗಳ ಜೇಬು ತುಂಬಿಸುವ ವ್ಯವಹಾರ

Last Updated 6 ಜೂನ್ 2022, 4:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ತವ್ಯಕ್ಕಿಂತ ಜೇಬು ತುಂಬಿಸುವ ವ್ಯವಹಾರಗಳಿಗೆ ಅಧಿಕಾರಿಗಳು ಎಷ್ಟು ಒತ್ತು ನೀಡುತ್ತಾರೆ ಎಂಬುದು ಗೊತ್ತಾಗಬೇಕಾದರೆ, ಇಲ್ಲಿನ ಮಹಾನಗರ ಪಾಲಿಕೆಯ ಕಚೇರಿಗಳಲ್ಲಿ ಹೊಕ್ಕಿ ಹೊರಬೇಕು.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಗರ ಯೋಜನಾ ವಿಭಾಗದ ಕಚೇರಿ ಮುಂದೆ ಕೆಲವರು ಬೆಳಿಗ್ಗೆಯಿಂದ ಅರ್ಜಿಗಳನ್ನು ಹಿಡಿದು ನಿಂತಿದ್ದರೆ, ಉಳಿದವರು ಹೀಗೆ ಬಂದು ಹಾಗೆ ಕೆಲಸ ಮುಗಿಸಿಕೊಂಡು ಹೋಗುವವರಿದ್ದಾರೆ. ಅಧಿಕಾರಿಗಳ ವ್ಯವಹಾರ ಕುದುರಿಸುವ ಕಲೆಗೆ ಇದೊಂದು ಸಣ್ಣ ನಿದರ್ಶನವಷ್ಟೇ.

ಆಯಾ ಕಚೇರಿ ಮುಖ್ಯಸ್ಥರು ತಮ್ಮ ಸೀಟಿನಲ್ಲಿರುವುದಕ್ಕಿಂತ ಹೊರಗಡೆ ಇರುವುದೇ ಹೆಚ್ಚು. ‘ಸಾರ್ ಅವರನ್ನು ಕಾಣಬೇಕಿತ್ತು’ ಎಂದು ಕಚೇರಿಗೆ ಸಾರ್ವಜನಿಕರು ಕೇಳಿಕೊಂಡು ಬಂದರೆ, ‘ಸಾಹೇಬ್ರು ಮೀಟಿಂಗ್ ಹೋಗಿದ್ದಾರೆ, ರೌಂಡ್ಸ್‌ನಲ್ಲಿದ್ದಾರೆ ಅಥವಾ ರಜೆಯಲ್ಲಿದ್ದಾರೆ. ಯಾವಾಗ ಬರುತ್ತಾರೊ ಗೊತ್ತಿಲ್ಲ’ ಎನ್ನುವ ಸಿದ್ಧ ಉತ್ತರಗಳು ಅಲ್ಲಿ ಸಿಗುತ್ತವೆಯೇ ಹೊರತು, ‘ಏತಕ್ಕಾಗಿ ಬಂದಿದ್ದೀರಿ? ಏನು ಕೆಲಸವಾಗಬೇಕು’ ಎಂಬ ಸ್ಪಂದನೆಯ ಮಾತುಗಳು ಕಿವಿಗೆ ಬೀಳುವುದಿಲ್ಲ.

ಕೆಲ ಅಧಿಕಾರಿಗಳು ತಮ್ಮ ವ್ಯವಹಾರಗಳನ್ನು ಕುದುರಿಸಿಕೊಳ್ಳಲು ಸ್ಥಳೀಯ ಗುತ್ತಿಗೆದಾರರು, ಪಾಲಿಕೆ ಸದಸ್ಯ ಹಾಗೂ ಕಚೇರಿ ಒಳ–ಹೊರಗು ಬಲ್ಲ ಏಜೆಂಟರ ಬಳಗವನ್ನೇ ಕಟ್ಟಿಕೊಂಡಿದ್ದಾರೆ. ಹಲವು ವರ್ಷಗಳಿಂದ ಒಂದೇ ಕಡೆ ನೆಲೆಯೂರಿರುವ ಇವರು, ಕಚೇರಿ ಕೆಲಸಗಳಿಂದಿಡಿದು ಟೆಂಡರ್‌ವರೆಗೂ ಬೇಕಾದವರಿಗೆ ಆದ್ಯತೆ ಕೊಡುತ್ತಾ, ತಮ್ಮ ಪರ್ಸೆಂಟೇಜ್ ಜೇಬಿಗಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT