ಮಂಗಳವಾರ, ಮೇ 24, 2022
31 °C

ಹುಬ್ಬಳ್ಳಿಯಲ್ಲಿ ಗಾಳಿ ಸಮೇತ ಭಾರೀ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಸಂಜೆ ಭಾರೀ ಗಾಳಿ ಹಾಗೂ ಗುಡುಗು ಸಮೇತ ಧಾರಾಕಾರ ಮಳೆ ಸುರಿಯಿತು.

ಸಂಜೆ 5.45ಕ್ಕೆ ಆರಂಭಗೊಂಡು ಸುಮಾರು ಅರ್ಧ ತಾಸು ಸುರಿದ ಮಳೆ ಅಬ್ಬರಕ್ಕೆ ನಗರದ ಕೆಲವೆಡೆ ಮರಗಳು ಹಾಗೂ ಕೊಂಬೆಗಳು ಧರೆಗುರುಳಿವೆ. ಬಾದಾಮಿ ನಗರದಲ್ಲಿ ಶಾಸಕ ಜಗದೀಶ ಶೆಟ್ಟರ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೆಂಗಾವಲು ವಾಹನದ ಮೇಲೆ ಮರವೊಂದು ಉರುಳಿ ಬಿದ್ದಿದೆ.

ಗೋಕುಲ ರಸ್ತೆಯ ಕುಮಾರಪಾರ್ಕ್‌ನ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿಬಿದ್ದಿದೆ. ಹಳೇ ಹುಬ್ಬಳ್ಳಿಯ ದುರ್ಗದ ಬೈಲ್‌ನ ಮಹಾತ್ಮ ಗಾಂಧಿ ಮಾರುಕಟ್ಟೆಯ ಹಳೆಯ ಕಟ್ಟಡದ ಚಾವಣಿ ಮಳೆಯ ಹೊಡೆತಕ್ಕೆ ಕುಸಿದಿದೆ. ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಅಪಾಯ ಸಂಭವಿಸಿಲ್ಲ. ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದಿರುವ ವರದಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು