ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಿಕೆಗೆ ಇತಿಹಾಸ ಪೂರಕ: ಸತ್ಯಮೂರ್ತಿ ಆಚಾರ್ಯ

Published 8 ಜುಲೈ 2024, 15:26 IST
Last Updated 8 ಜುಲೈ 2024, 15:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇತಿಹಾಸ ಎಂದರೆ ಸಾಮಾನ್ಯವಾಗಿ ನಡೆದು ಹೋದ ಘಟನೆಗಳು ಎನ್ನುತ್ತೇವೆ. ಆದರೆ, ಆ ಘಟನಾವಳಿಗಳು ಕಲಿಕೆಗೆ ಪೂರಕವಾಗಿರಬೇಕು’ ಎಂದು ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ (ಕೆಎಸ್ಎಸ್ಎಸ್) ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಕಾರ್ಯದರ್ಶಿ ಸತ್ಯಮೂರ್ತಿ ಆಚಾರ್ಯ ತಿಳಿಸಿದರು.

ಇಲ್ಲಿನ ಬುಡರಸಿಂಗಿಯಲ್ಲಿರುವ ಕೆಎಸ್ಎಸ್ಎಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಂಟಿ ಕಾರ್ಯದರ್ಶಿ ಗೋಪಾಲ ಕುಲಕರ್ಣಿ, ‘ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಆಹಾರ, ಒಳ್ಳೆಯ ಶಿಕ್ಷಣ ಹಾಗೂ ನುರಿತ ಶಿಕ್ಷಕರು ಇರುವುದರಿಂದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿಥಿ ಶಾಕೀರ್ ಸನದಿ, ‘ಜಗತ್ತು ವೇಗವಾಗಿ ನಡೆಯುತ್ತಿದೆ, ಅದರ ಜೊತೆಗೆ ನಾವು ನಡೆಯಬೇಕಿದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಖಜಾಂಚಿ ಎ.ಪಿ. ಐತಾಳ್, ಪ್ರಾಚಾರ್ಯ ಮಹೇಂದ್ರ ಜಿ.ಎ., ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ್ ಮಾತನಾಡಿದರು. ಶ್ರೀಪತಿ ಐತಾಳ್, ಕೃಷ್ಣರಾಜ ಕೆಮ್ತೂರ್ ಇದ್ದರು.

ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT