ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿನ ರೋಗಿಗಳ ಹಾಸಿಗೆಗೆ ವಾರದ ಏಳು ದಿನ, ಏಳು ಬಣ್ಣದ ಬೆಡ್ಶೀಟ್ ಹಾಗೂ ದಿಂಬಿನ ಕವರ್ ಹಾಕುವ ಯೋಜನೆ ಭಾನುವಾರದಿಂದ ಜಾರಿಯಾಗಲಿದೆ.

ಕಿಡ್ನಿ, ಹೃದಯ ಮತ್ತು ಕಾಲಿನ ಸಮಸ್ಯೆಯಿಂದ ಇದೇ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರಚಿಕಿತ್ಸೆಗೆ ಒಳಗಾದ ನಗರದ ಮಂಟೂರು ರಸ್ತೆಯ ಫಾತಿಮಾ ದಾವೂದ್ ಅವರ ಕುಟುಂಬವು ₹ 2 ಲಕ್ಷ ಮೌಲ್ಯದ ಬೆಡ್ಶೀಟ್ ಮತ್ತು ದಿಂಬು ದೇಣಿಗೆ ನೀಡಿದೆ.

ಯಾವ ದಿನ ಯಾವ ಬಣ್ಣದ ಬೆಡ್ಶೀಟ್ ಮತ್ತು ದಿಂಬು ಹಾಕಬೇಕೆಂದು ಅದರ ಮೇಲೆ ಬರೆಯಲಾಗಿದೆ. ಭಾನುವಾರಕ್ಕೆ ತಿಳಿ ಹಸಿರು, ಸೋಮವಾರ ಕಂದು, ಮಂಗಳವಾರ ಕೆಂಪು, ಬುಧವಾರ ಅಚ್ಚ ಹಸಿರು, ಗುರುವಾರ ನೀಲಿ, ಶುಕ್ರವಾರ ಗುಲಾಬಿ ಮತ್ತು ಶನಿವಾರಕ್ಕೆ ನೇರಳೆ ನಿಗದಿಯಾಗಿದೆ.

‘ಸರ್ಕಾರಿ ಆಸ್ಪತ್ರೆ ಎಂದ ಕೂಡಲೇ ಅಲ್ಲಿ ಶುಚಿತ್ವ ಕಾಯ್ದುಕೊಳ್ಳಲ್ಲ, ನಿರ್ವಹಣೆ ಸಮರ್ಪಕವಾಗಿ ಇರಲ್ಲ ಎಂಬ ಮನೋಭಾವ ಕೆಲವರಲ್ಲಿ ಇರುತ್ತದೆ. ಅದನ್ನು ಕೊನೆಗೊಳಿಸಲೆಂದೇ, ವಾರದ ಪ್ರತಿ ದಿನ ಬೇರೆ ಬೇರೆ ಬಣ್ಣದ ಬೆಡ್ಶೀಟ್ ಮತ್ತು ದಿಂಬಿನ ಕವರ್ ಹಾಕಲು ನಿರ್ಧರಿಸಿದ್ದೇವೆ. ಶುಚಿತ್ವ ಮತ್ತು ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡುತ್ತೇವೆ’ ಎಂದು ಚಿಟಗುಪ್ಪಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ತಿಳಿಸಿದರು.

‘ಈವರೆಗೆ ಬಳಸುತ್ತಿದ್ದ ಹಳೆಯ ಬೆಡ್ಶೀಟ್ಗಳನ್ನು ಪಾಲಿಕೆ ಬೇರೆ ಆಸ್ಪತ್ರೆಗೆ ರವಾನಿಸುತ್ತೇವೆ. ಬಟ್ಟೆಗಳನ್ನು ತೊಳೆಯಲೆಂದೇ 30 ಕೆಜಿಯ ವಾಷಿಂಗ್ ಮಷಿನ್ ಅನ್ನು ಖರೀದಿಸಿದ್ದೇವೆ. ಬಟ್ಟೆಯನ್ನು ತೊಳೆಯುತ್ತಾರೋ ಇಲ್ಲವೋ ಎಂದು ಗಮನಿಸಲು, ವಿಶೇಷ ತಂಡವನ್ನು ಸಹ ರಚಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಫಾತಿಮಾ ದಾವೂದ್ ಅವರು ಎಂಟು ತಿಂಗಳಿನಿಂದ ಕಿಡ್ನಿ, ಹೃದಯ ಸೇರಿ ಇನ್ನಿತರ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಕಡಿಮೆಯಾಗಿರಲಿಲ್ಲ. ವಾರದ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಲಾಗಿತ್ತು. ಹೀಗಾಗಿ ದೇಣಿಗೆ ರೂಪದಲ್ಲಿ ಬೆಡ್ಶೀಟ್ ಮತ್ತು ದಿಂಬು ನೀಡಿದ್ದಾರೆ’ ಎಂದು ಅವರು ವಿವರಿಸಿದರು.

ಚಿಕಿತ್ಸೆಗೆ ಒಳಗಾಗಿ ಗುಣಮುಖವಾದ ರೋಗಿಗಳೇ ಆಸ್ಪತ್ರೆಗೆ ದೇಣಿಗೆ ನೀಡುತ್ತಿದ್ದಾರೆ. ಇದು ಮಾದರಿ ಬೆಳವಣಿಗೆ ಸ್ವಚ್ಛತೆಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗುವುದು
–ರುದ್ರೇಶ ಘಾಳಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾರದ ಏಳು ದಿನ ಏಳು ಬಣ್ಣದ ಬೆಡ್ಶೀಟ್ ಬಳಸುವ ವ್ಯವಸ್ಥೆಯಿದೆ. ಇದು ನಮ್ಮ ರಾಜ್ಯದಲ್ಲಿ ವಿನೂತನ ಪ್ರಯೋಗವಾಗಲಿದೆ.
– ಡಾ. ಶ್ರೀಧರ ದಂಡಪ್ಪನವರ, ಮುಖ್ಯ ವೈದ್ಯಾಧಿಕಾರಿ, ಚಿಟಗುಪ್ಪಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.