ಕುಡಿಯುವ ನೀರು ಎಲ್‌ಇಡಿ ಬೀದಿ ದೀಪ ಅಳವಡಿಕೆಯಂತಹ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಬೇಕು.
–ವೀರಣ್ಣ ಸವಡಿ, ಸದಸ್ಯ
ಮೇಯರ್ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಸದಸ್ಯರ ವರ್ತನೆ ಖಂಡನೀಯ. ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸದೇ ಈ ರೀತಿ ವರ್ತಿಸಿದ್ದು ಸರಿಯಲ್ಲ.
– ತಿಪ್ಪಣ್ಣ ಮಜ್ಜಗಿ, ಸದಸ್ಯ
ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆ ರದ್ದುಪಡಿಸಿದರೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಬದಲಿಗೆ ಟೆಂಡರ್ ಪಡೆದವರು ಹೆಚ್ಚುವರಿ ಶುಲ್ಕ ಸಂಗ್ರಹಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗಬೇಕು
ನಜೀರ್ ಅಹ್ಮದ್ ಹೊನ್ಯಾಳ, ಸದಸ್ಯ, ಎಐಎಂಐಎಂ
ಎಲ್ ಆ್ಯಂಡ್ ಟಿ ಕಂಪನಿಗೆ ಈ ಹಿಂದೆಯೂ ದಂಡ ವಿಧಿಸಲಾಗಿತ್ತು. ಅವರು ಭರಿಸಿಲ್ಲ. ಪಾಲಿಕೆಯಿಂದ ನೀಡುವ ವಂತಿಗೆಯಲ್ಲಿ ಅದನ್ನು ಕಡಿತ ಮಾಡಬೇಕು.
ಈರೇಶ ಅಂಚಟಗೇರಿ, ಸಭಾನಾಯಕ, ಹು–ಧಾ ಮಹಾನಗರ ಪಾಲಿಕೆ
ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಅವರನ್ನು ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ಆಸ್ಪತ್ರೆಗೆ ಕರೆದೊಯ್ದರು