ಹುಬ್ಬಳ್ಳಿ: ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೆ ಇದೆ ಹಲವು ಹೆಸರು. ಹೂ ಬಿಡುವ ಹಳ್ಳಿ, ಪುರಬಳ್ಳಿ, ರಾಯರ ಹುಬ್ಬಳ್ಳಿ. ವಿಜಯನಗರ ರಾಯರ ಆಳ್ವಿಕೆ ಸಮಯದಲ್ಲಿ ಹುಬ್ಬಳ್ಳಿಯು ಹತ್ತಿ, ಉಪ್ಪಿನಕಾಯಿ ಮತ್ತು ಕಬ್ಬಿಣದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿನ ವ್ಯಾಪಾರಸ್ಥರ ಕೇಂದ್ರ ಸ್ಥಾನ ದುರ್ಗದಬೈಲ್.

ದುರ್ಗದಬೈಲ್ನ ಇತಿಹಾಸವೂ ಆಸಕ್ತಿಕರವಿದೆ. 1727ರಲ್ಲಿ ವ್ಯಾಪಾರಿ ಬಸಪ್ಪ ಶೆಟ್ಟರು ಸವಣೂರಿನ ನವಾಬ್ನ ಅನುಮತಿ ಪಡೆದು, ವ್ಯಾಪಾರ–ವಹಿವಾಟಿನ ವಿಸ್ತರಣೆ ಬಯಸಿದರು. ಅದಕ್ಕೆ ಹುಬ್ಬಳ್ಳಿ ಅಲ್ಲದೇ ದುರ್ಗದಬೈಲ್ ಸುತ್ತಲೂ ಕೋಟೆಯನ್ನು ನಿರ್ಮಿಸಿದರು. ಯುದ್ಧದ ಸಂದರ್ಭದಲ್ಲಿ ದುರ್ಗಬೈಲ್ನ ಬಯಲು ಪ್ರದೇಶದಲ್ಲಿ ಆನೆ, ಕುದುರೆ ಕಟ್ಟಲಾಗುತ್ತಿತ್ತು. ದಸರಾ ಹಬ್ಬದ ಆಚರಣೆಯೂ ಅದ್ದೂರಿಯಾಗಿ ನಡೆಯುತ್ತಿತ್ತು.

ವರ್ಷಗಳು ಕಳೆದಂತೆ ಹತ್ತಿ ಜಿನ್ನಿಂಗ್ ಮತ್ತು ಕೈಮಗ್ಗ ಜವಳಿ ಉದ್ಯಮದ ಭಾಗವಾಗಿ ಸಂಸ್ಕರಣಾ ಗಿರಣಿಗಳು ಅಸ್ತಿತ್ವಕ್ಕೆ ಬಂದವು. ನಂತರ ಹತ್ತಿ ಮತ್ತು ಕಡಲೆಕಾಯಿ ವ್ಯಾಪಾರದ ಕೇಂದ್ರವಾಯಿತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಲು ಆಕರ್ಷಕ ತಾಣವಾಯಿತು. ‘ಹೋರಾಟ, ಸಭೆ, ಸಮಾವೇಶ, ಪ್ರತಿಭಟನೆ ಆಯೋಜಿಸಬೇಕಿದ್ದರೆ ಅಥವಾ ಆರಂಭ ಆಗಬೇಕಿದ್ದರೆ, ದುರ್ಗದಬೈಲ್ ಪ್ರಶಸ್ತ ಸ್ಥಳ’ ಎಂಬ ಮಾತು ನಿಧಾನವಾಗಿ ಚಾಲ್ತಿಗೆ ಬಂತು.

ವಿಶಾಲವಾದ ಮೈದಾನದಂತೆ ಇದ್ದ ದುರ್ಗದಬೈಲ್ನ ನಟ್ಟನಡುವ ನಟ್ಟನಡುವೆ ವಿದ್ಯುತ್ ಕಂಬ ಅಳವಡಿಕೆ ಆಯಿತು. ಅದರ ದೀಪವು ಇಡೀ ಆವರಣಕ್ಕೆ ಪಸರಿಸುತಿತ್ತು. ಬೆಳಿಗ್ಗೆ ಮತ್ತು ಮಧ್ಯಾಹ್ನ ವೇಳೆ ಇರದ ಜನಜಂಗುಳಿ ಸಂಜೆ ಮತ್ತು ರಾತ್ರಿ ವೇಳೆ ವಿಶೇಷ ಮೆರುಗು ಪಡೆಯುತಿತ್ತು. ಒಬ್ಬ ನಾಯಕ ಕಂಬದ ಬಳಿ ನಿಂತು ಪ್ರತಿಭಟನೆಯ ನೇತೃತ್ವ ವಹಿಸಿಕೊಂಡು ಮಾತನಾಡಿದರೆ, ಇನ್ನೊಂದು ತುದಿಯಲ್ಲಿ ಜನರ ಗುಂಪು ಘೋಷಣೆ ಹಾಕುತಿತ್ತು.

ದುರ್ಗದ್ಬೈಲ್ನಲ್ಲಿ ಎಲ್ಲವೂ ಸಿಗುತ್ತವೆ. ಇಂಥವು ಇಲ್ಲ ಎಂಬುದು ಇಲ್ಲ. ಅದೂ ಕಡಿಮೆ ದರಕ್ಕೆ. ಹಬ್ಬ ಅಥವಾ ಉತ್ಸವದ ಸಂದರ್ಭದಲ್ಲಂತೂ ಅಲ್ಲಿ ಕಾಲಿಡಲು ಕೂಡ ಆಗದು. ಸದ್ಯದ ಸ್ಥಿತಿಯಲ್ಲಿ ಆ ಸ್ಥಳವು ವಿಶಾಲ ಮೈದಾನದ ಸ್ವರೂಪ ಕಳೆದುಕೊಂಡು ಜನದಟ್ಟಣೆಯ ಪ್ರದೇಶವಾಗಿದೆ. ವರ್ಷಗಳು ಕಳೆದಂತೆ ಅದರ ನೋಟ ಬದಲಾಗುತ್ತಿದೆ.

ಬೀದಿ ವ್ಯಾಪಾರಸ್ಥರು ಮತ್ತು ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರ ಪೈಪೋಟಿ ಒಂದೆಡೆ ಇದ್ದರೆ, ಇನ್ನೊಂದೆಡೆ ಬೇಲ್ಪುರಿ–ಗಿರಿಮಿಟ್ಟು ಸಿದ್ಧಪಡಿಸುವ ತಳ್ಳುಗಾಡಿಯವರ ಸ್ಪರ್ಧೆ ಇರುತ್ತದೆ. ಓಡಾಡಿಕೊಂಡು ಬಲೂನ್, ಆಟಿಕೆ ವಸ್ತುಗಳನ್ನು ಮಾರುವವರ ಜೊತೆಗೆ, ನಿಂತಲ್ಲೇ ಪುಟ್ಟ ಮೇಜಿನ ಮೇಲೆ ಆಟಿಕೆಗಳನ್ನು ಇಟ್ಟು ಮಾರುವವರಿದ್ದಾರೆ. ಸಂಜೆಯೇರುತ್ತಿದ್ದಂತೆ ರಂಗೇರುವ ದುರ್ಗದಬೈಲ್ ರಾತ್ರಿ ವೇಳೆ ಝಗಮಗಿಸುತ್ತದೆ. ಇನ್ನೊಂದು ವಿಷಯ: ಹುಬ್ಬಳ್ಳಿಗೆ ಬಂದವರು, ದುರ್ಗದಬೈಲ್ ಭೇಟಿ ನೀಡದೇ ಇರುವುದಿಲ್ಲ.

ಬ್ರಿಟಿಷರು ತೋಪುಗಳನ್ನು ಹಾರಿಸಿ ಸುಟ್ಟು ಹೋದ ಸ್ಥಳದಲ್ಲಿ ಬಸಪ್ಪಶೆಟ್ಟರ್ ಅವರ ಶ್ರಮದಿಂದ ನಿರ್ಮಾಣವಾಗಿರುವ ದುರ್ಗದಬೈಲ್ ಮಧ್ಯಮ ವರ್ಗದವರ ವ್ಯಾಪಾರದ ಕೇಂದ್ರ ಸ್ಥಳವಾಗಿದೆ
ಪಾಂಡುರಂಗ ಪಾಟೀಲ ಮಾಜಿ ಮೇಯರ್

ಹುಬ್ಬಳ್ಳಿ ಹಳೆ ಹುಬ್ಬಳ್ಳಿ ಹೊಸ ಹುಬ್ಬಳ್ಳಿ ಎಂದು ಭಾಗವಾಗಿದೆ. ದುರ್ಗದಬೈಲ್ ಪಾರಂಪರಿಕ ವ್ಯಾಪಾರ ಕೇಂದ್ರ. ಇಲ್ಲಿ ಬಟ್ಟೆ ಪಾತ್ರೆ ಹಿಂದಿನಿಂದಲೂ ತಯಾರಿಸಿ ಮಾರಾಟ ಮಾಡಲಾಗುತ್ತಿದೆ
ನಾರಾಯಣ ಘಳಿಗಿ ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.