ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಈದ್ಗಾದಲ್ಲಿ ಗಣೇಶೋತ್ಸವ: ಪಾಲಿಕೆಯಿಂದ ಅನುಮತಿ

Published 3 ಸೆಪ್ಟೆಂಬರ್ 2024, 13:16 IST
Last Updated 3 ಸೆಪ್ಟೆಂಬರ್ 2024, 13:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಪ್ರಸ್ತುತ ವರ್ಷವೂ ಮೂರು ದಿನಗಳ ಅನುಮತಿ ನೀಡಿದೆ. ಮಂಡಳಿಯ ಪದಾಧಿಕಾರಿಗಳಿಗೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ವಿತರಿಸಿದರು.

‘ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸೆಪ್ಟೆಂಬರ್ 7 ರಿಂದ 9ರವರೆಗೆ ಉತ್ಸವ ಆಚರಿಸಬಹುದು. ಸೂಚಿಸಿದ ಜಾಗದಲ್ಲೇ ಪೆಂಡಾಲ್‌ ಹಾಕಬೇಕು. ಬೇರೆ ಯಾವುದೇ ರೀತಿ ಬಾವುಟ, ಪ್ರಚೋದನಕಾರಿ ಭಾವಚಿತ್ರ, ಭಿತ್ತಿ ಪತ್ರ, ಬ್ಯಾನರ್, ಬಂಟಿಂಗ್ಸ್ ಅಳವಡಿಸಬಾರದು. 19 ಷರತ್ತುಗಳನ್ನೂ ಪಾಲಿಸಬೇಕು’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

‘ಕಳೆದ ವರ್ಷದಂತೆ ಈ ಸಲವೂ ನಮ್ಮ ಮಹಾಮಂಡಳಕ್ಕೆ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಸಿಕ್ಕಿದೆ. ಉತ್ಸವಕ್ಕೆ ಸಿದ್ಧತೆ ನಡೆದಿದೆ’ ಎಂದು ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT