ಬುಧವಾರ, ಡಿಸೆಂಬರ್ 7, 2022
22 °C

ಬಾರ್‌ನಲ್ಲಿ ಗಲಾಟೆ: ಹುಬ್ಬಳ್ಳಿ–ಧಾರವಾಡ ಪಾಲಿಕೆ ಸದಸ್ಯ ಚೇತನ್ ಹಿರೆಕೆರೂರು ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಗೋಕುಲ‌ ರಸ್ತೆಯ ಐಸ್ ಕ್ಯೂಬ್ ಹೋಟೆಲ್'ನಲ್ಲಿ ಭಾನುವಾರ ರಾತ್ರಿ ನಡೆದ ಗಲಾಟೆಗೆ ಸಂಬಂಧಿಸಿ ಪಾಲಿಕೆ  ಸದಸ್ಯ ಚೇತನ ಹಿರೆಕೆರೂರು ಸೇರಿದಂತೆ ನಾಲ್ವರನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸದ್ದಾರೆ.

ಹೊಸೂರಿನ ನಿವಾಸಿಗಳಾದ ರೋಹಿತ ಹಿರೇಕೆರೂರ, ಸಹದೇವ ಹಿರೇಕೆರೂರ ಮತ್ತು ಪ್ರಕಾಶ ಬಂಧಿತ ಇತರ ಆರೋಪಿಗಳು. ಗಲಾಟೆಯಲ್ಲಿ ಹಲ್ಲೆಗೊಳಗಾದ ಕಾರವಾರ ರಸ್ತೆಯ ಮಂಗಲ ಓಣಿ ನಿವಾಸಿ ಬಸವರಾಜ ಚಂದಾವರಕರ ಪ್ರಕರಣ ದಾಖಲಿಸಿದ್ದಾರೆ.

ಬಸವರಾಜ ಅವರು ಸ್ನೇಹಿತರ ಜೊತೆ ಹೋಟೆಲ್'ನಲ್ಲಿ ಇದ್ದಾಗ ಆರೋಪಿಗಳು, ಅವರ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾರೆ. ನಂತರ ಮದ್ಯದ ಬಾಟಲಿಯಿಂದ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಪೊಲೀಸ್ ದೂರು ನೀಡಿದರೆ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು