ಹುಬ್ಬಳ್ಳಿ: ವಿವಿಧ ಕಾರ್ಯಾಚರಣೆ ಕಾರಣ ರೈಲುಗಳ ತಾತ್ಕಾಲಿಕ ರದ್ದತಿಯನ್ನು ದಕ್ಷಿಣ ಮಧ್ಯ ರೈಲ್ವೆ ವಿಸ್ತರಿಸಿದೆ.

ಮಾರ್ಚ್ 7ರವರೆಗ ತಿರುಪತಿ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು (57401), ಮಾರ್ಚ್ 8ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ–ತಿರುಪತಿ ಡೈಲಿ ಪ್ಯಾಸೆಂಜರ್ ರೈಲು (57402) ಸಂಚಾರ ರದ್ದಾಗಲಿದೆ.

ಭಾಗಶಃ ರದ್ದತಿ: ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್–ಲೋಂಡಾ ಭಾಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿ ನಡೆಯುವುದರಿಂದ ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ.

ಮಾರ್ಚ್ 31ರಂದು ಮಿರಜ್–ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲು (17333) ಸಂಚಾರ ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಹೋಗುವುದಿಲ್ಲ.

ಮಾರ್ಚ್ 31ರಂದು ಕ್ಯಾಸಲ್ ರಾಕ್–ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲು (17334) ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದಲೇ ಹೊರಡಲಿದೆ.

ಕುಡಚಿ–ಉಗಾರ ಖುರ್ದ್ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುವ ಕಾರಣ ಫೆಬ್ರುವರಿ 27ರಿಂದ ಮಾರ್ಚ್ 9ರವರೆಗೆ ಬೆಳಗಾವಿ–ಮಿರಜ್ ಡೈಲಿ ಕಾಯ್ದಿರಿಸದ ವಿಶೇಷ ರೈಲು (07303) ಸಂಚಾರ ಕುಡಚಿಯಲ್ಲಿ ಕೊನೆಗೊಳ್ಳಲಿದೆ. ಮಿರಜ್ಗೆ ತೆರಳುವುದಿಲ್ಲ.

ಫೆ.27ರಿಂದ ಮಾರ್ಚ್ 9ರವರೆಗೆ ಮಿರಜ್–ಬೆಳಗಾವಿ ಡೈಲಿ ಕಾಯ್ದಿರಿಸದ ವಿಶೇಷ ರೈಲು (07304) ಮಿರಜ್ ಬದಲಿಗೆ ಕುಡಚಿಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.