ಇನ್ಫೊಸಿಸ್ ಸಂಸ್ಥೆಗೆ ಸರ್ಕಾರ 58 ಎಕರೆ ಜಾಗ ನೀಡಿದ್ದು ಅದನ್ನು ಯಾವ ರೀತಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಮುಂದಿನ 5 ವರ್ಷಗಳಲ್ಲಿ 10 ಸಾವಿರ ಉದ್ಯೋಗಾವಕಾಶ ಕಲ್ಪಿಸುವ ಗುರಿ ನೀಡಬೇಕು
ಸಂತೋಷ ನರಗುಂದ , ಸಾಮಾಜಿಕ ಕಾರ್ಯಕರ್ತ
ಇನ್ಫೊಸಿಸ್ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಸಾವಿರ ದಾಟಿರುವುದು ಖುಷಿಯ ಸಂಗತಿ. ಇದಕ್ಕೆ ಜಮೀನು ನೀಡಿದ ರೈತರ ಮಕ್ಕಳಿಗೂ ಉದ್ಯೋಗ ಸಿಗಲಿ
ಅರವಿಂದ ಬೆಲ್ಲದ , ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಇನ್ಫೊಸಿಸ್ ಕ್ಯಾಂಪಸ್‌ಗೆ ರೈತರ ಅಮೂಲ್ಯವಾದ ಜಾಗವನ್ನು ನೀಡಲಾಗಿದೆ. ಅಷ್ಟು ಜಾಗ ಪಡೆದ ಕಂಪನಿ ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿ ಮಾಡಿಲ್ಲ.