ಹುಬ್ಬಳ್ಳಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಮತ್ತು ಗುಜರಾತ್ನ ಅಹಮದಾಬಾದ್ ಸಮೀಪದ ವಾಟ್ವಾ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ವಿಶೇಷ ರೈಲು (07333) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ವಾಟ್ವಾಗೆ ಏಪ್ರಿಲ್ 13ರಿಂದ ಜೂನ್ 15ರವರೆಗೆ ಪ್ರತಿ ಭಾನುವಾರ ಸಂಜೆ 7.30ಕ್ಕೆ ಹೊರಟು, ಮರು ದಿನ ಸಂಜೆ 6.45ಕ್ಕೆ ವಾಟ್ವಾ ತಲುಪಲಿದೆ.

ರೈಲು (07334) ವಾಟ್ವಾದಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಏಪ್ರಿಲ್ 14 ರಿಂದ ಜೂನ್ 16 ರವರೆಗೆ ಪ್ರತಿ ಸೋಮವಾರ ರಾತ್ರಿ 9.45ಕ್ಕೆ ಹೊರಡಲಿದ್ದು, ಮಂಗಳವಾರ ರಾತ್ರಿ 7.45ಕ್ಕೆ ಹುಬ್ಬಳ್ಳಿಗೆ ಬರಲಿದೆ.

ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರಸ್ತೆ, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.