ಅವಳಿ ನಗರ ಯಾವ ರೀತಿ ಅಭಿವೃದ್ಧಿಯಾಗಬೇಕೆನ್ನುವ ಮಾಸ್ಟರ್ ಪ್ಲ್ಯಾನ್ (ಮಹಾ ಯೋಜನೆ) ಸಿದ್ಧಪಡಿಸಲಾಗುತ್ತಿದೆ. ಮುಂದಿನ ತಿಂಗಳು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಇದು ಜಾರಿಯಾದರೆ ಹುಬ್ಬಳ್ಳಿ–ಧಾರವಾಡ ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಲಿದೆ
ಶಾಕೀರ ಸನದಿ ಹುಬ್ಬಳ್ಳಿ– ಧಾರವಾಡ ಅಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ
ಸ್ಥಳೀಯ ಯೋಜನಾ ಪ್ರದೇಶವನ್ನು ಹುಡಾ ವಿಸ್ತರಿಸುವುದು ಸ್ವಾಗತಾರ್ಹ. ಈ ಪ್ರಕ್ರಿಯೆ ಸಹಜವಾಗಿಯೇ ರಿಯಲ್ ಎಸ್ಟೇಟ್ ಗೆ ಬೂಮ್ ಕೊಡಲಿದೆ. ಹುಡಾದವರು ಕೂಡ ಹೊಸ ವಸತಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಿದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯವಾಗಲಿದೆ.
ವಿರೇಶ ಉಂಡಿ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಎಂಡಿ
ಎಲ್‌ಪಿಎ ವಿಸ್ತರಣೆಯಿಂದ ಅಕ್ರಮ ಬಡಾವಣೆಗಳಿಗೆ ಕಡಿವಾಣ ಬೀಳಲಿದೆ. ಜಮೀನು ಮಾರುವ ರೈತರಿಗೆ ಹಾಗೂ ನಿವೇಶನ ಖರೀದಿಸುವ ಜನರಿಗೆ ಅನುಕೂಲವಾಗಲಿದೆ. ಸೂರು ಹೊಂದುವ ಜನರ ಆಸೆ ಕೈಗೂಡಲಿದೆ. ರಸ್ತೆ ನೀರು ಒಳಚರಂಡಿ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಬಡಾವಣೆಗಳಲ್ಲಿ ಕಡ್ಡಾಯವಾಗಿ ಇರುವಂತೆ ಹುಡಾ ನೋಡಿಕೊಳ್ಳಬೇಕು