ಗುಳೇದಗುಡ್ಡ: ಕಾರ್ಮಿಕರು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಕಟ್ಟಡ ಸೇರಿದಂತೆ ಇತರೆ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಪಟ್ಟಣದ ಹೊಸಪೇಟೆ ಸಂಗನಬಸವೇಶ್ವರ ನಗರದಲ್ಲಿ ಗುರುವಾರ ಲಕ್ಷ್ಮಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳು ನೈಜ ಕಟ್ಟಡ ಕಾರ್ಮಿಕರಿಗೆ ತಲುಪಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಕಾರ್ಮಿಕರು ಈ ಸಮಾಜದ ಮುಖ್ಯ ಅಂಗ. ಅವರನ್ನು ಸಮಾಜ ಗೌರವದಿಂದ ಕಾಣಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಕೆಲಸ ಮಾಡಬೇಕು ಎಂದರು.

ಕಟ್ಟಡ ಕಾರ್ಮಿಕ ಮಕ್ಕಳಿಗೆ ಪಠ್ಯ ಸಲಕರಣೆಗಳನ್ನು ವಿತರಿಸಲಾಯಿತು. ಹಿರಿಯ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಭೀಮಪ್ಪ ಭಜಂತ್ರಿ, ಲಕ್ಷ್ಮಿ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಕಮಲಕಿಶೋರ ಮಾಲಪಾಣಿ, ಮಾಜಿ ಅಧ್ಯಕ್ಷ ಸಂಪತ್ತ ರಾಠಿ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ಮಹಾಂತೇಶ ಲಕ್ಕುಂಡಿ, ಸಂಘದ ಉಪಾಧ್ಯಕ್ಷ ಲಕ್ಷ್ಮಣ ಸಲಕಿ, ಕಾರ್ಯದರ್ಶಿ ಈರಣ್ಣ ಬನಿಗೋಳ, ಖಜಾಂಚಿ ಸಂಗನಬಸಪ್ಪ ತಾಂಡೂರ, ಸದಸ್ಯರಾದ ಶಿವಾನಂದ ಮನಗೂಳಿ, ಮಹಾಂತೇಶ ಭಜಂತ್ರಿ, ಮುತ್ತು ತೆಂಗೆನ್ನೆವರ, ಮಡ್ಡೆಪ್ಪ ಭಜಂತ್ರಿ, ರವೀಂದ್ರ ಭಜಂತ್ರಿ, ಸಂಜಯಕುಮಾರ ಹಟ್ಟಿ, ಪರಸಪ್ಪ ಭಜಂತ್ರಿ, ನೀಲನಗೌಡ ಪಾಟೀಲ, ಮಹಾಂತೇಶ ದುರಮುರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.