ಗುರುವಾರ , ಮೇ 26, 2022
30 °C

ಅಣ್ಣಿಗೇರಿ: ಜನತಾ ಜಲಧಾರೆ ರಥಕ್ಕೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಣ್ಣಿಗೇರಿ: ರಾಜ್ಯದಲ್ಲಿನ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥ ಸೋಮವಾರ ಪಟ್ಟಣಕ್ಕೆ ಆಗಮಿಸಿತು. ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ನೇತೃತ್ವದಲ್ಲಿ ಹಮ್ಮಿಕೊಂಡ ಜನತಾ ಜಲಧಾರೆ ರಥಕ್ಕೆ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಚಾಲನೆ ನೀಡಿದರು. ರಾಜ್ಯದಲ್ಲಿ ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಉತ್ತಮ ಆಡಳಿತ ಬೇಕಾಗಿದೆ. ಆದ್ದರಿಂದ ಈ ಬಾರಿ ಜೆಡಿಎಸ್‌ಗೆ ಪ್ರತಿಯೊಬ್ಬರೂ ಮತ ನೀಡುವ ಮೂಲಕ ಬೆಂಬಲಿಸಿ ಎಂದು ಪ್ರಕಾಶ ಅಂಗಡಿ ಮನವಿ ಮಾಡಿದರು.

ಮುಖಂಡರಾದ ಗುರುರಾಜ ಹುಣಶಿಮರದ, ಡಿ.ಎಂ.ಶಲವಡಿ, ಶ್ರೀಶೈಲಯ್ಯ ಮೂಲಿಮನಿ, ನಾರಾಯಣ ಮಾಡಳ್ಳಿ, ಬಸಮ್ಮ ಅಂಗಡಿ, ಶಿವಶಂಕರ ಕಲ್ಲೂರ, ವಿರೇಶ ಶಾನುಭೋಗರ, ವಿರೇಶ ಕುಬಸದ, ಜಿ.ಎನ್.ತೋಟದ, ಹಟೇಲಸಾಬ ಗಾಡಗೋಳಿ, ದಸಗೀರಸಾಬ ಸಂಗಟಿ, ಸಂಗಪ್ಪ ಅಂಗಡಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು