ಹುಬ್ಬಳ್ಳಿ: ರಾಜ್ಯದ ಹುಲಿ ಮೀಸಲು ಪ್ರದೇಶಗಳಲ್ಲಿ ಜಂಗಲ್ ಸಫಾರಿ ನಡೆಸಲು ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿಗೆ (ಇಡಿಸಿ) ಅವಕಾಶ ನೀಡುವಂತೆ ವನ್ಯಜೀವಿ ಮತ್ತು ಬುಡಕಟ್ಟು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಅವರ ಪ್ರಕಾರ ಇದು ಎರಡು ಪ್ರಮುಖ ಪ್ರಯೋಜನಗಳನ್ನು ಹೊಂದಿದೆ, ಒಂದು ಅರಣ್ಯದ ಸ್ಥಳೀಯರ ಒಳಗೊಳ್ಳುವಿಕೆ ಮತ್ತು ಅವರಿಗೊಂದು ಜೀವನೋಪಾಯ. ಜೊತೆಗೆ ಅರಣ್ಯ ರಕ್ಷಣೆ ಮತ್ತು ಸಂರಕ್ಷಣೆಯಂಥ ಪ್ರಾಥಮಿಕ ಕರ್ತವ್ಯ ನಿರ್ವಹಿಸಲು ಅರಣ್ಯ ಇಲಾಖೆಗೆ ಹೆಚ್ಚುವರಿ ಜನ ಸಿಕ್ಕಂತೆ ಆಗುತ್ತದೆ.

ತಡೋಬಾ, ರಣಥಂಬೋರ್, ಢೀಕಾಲಾ, ಪೆಂಚ್, ಬಾಂಧವಗಡ ಮತ್ತು ಇತರೆಡೆ ಸ್ಥಳೀಯ ಗ್ರಾಮಸ್ಥರು ಜಂಗಲ್ ಸಫಾರಿಗಳನ್ನು ನಡೆಸಿದರೆ, ಅರಣ್ಯ ಇಲಾಖೆಯು ಇದರ ಮೇಲ್ವಿಚಾರಣೆ ಮಾಡುತ್ತದೆ. ದೇಶದ ಹಲವು ಹುಲಿ ಮೀಸಲು ಅರಣ್ಯ ಸಂರಕ್ಷಿತ ಪ್ರದೇಶಗಳಲ್ಲಿ ಅಳವಡಿಸಿಕೊಂಡ ಈ ಮಾದರಿಯನ್ನು ಕರ್ನಾಟಕ ರಾಜ್ಯದಲ್ಲೂ ಅನುಸರಿಸಬಹುದು ಎಂದು ಪರಿಸರ ಕಾರ್ಯಕರ್ತರು ಮತ್ತು ತಜ್ಞರು ಹೇಳುತ್ತಾರೆ.

ಈ ಮೇಲಿನ ಎಲ್ಲ ಹುಲಿ ಮೀಸಲು ಅರಣ್ಯಗಳಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ಎದುರಿಸುತ್ತಿವೆ. ಈ ಮೀಸಲು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದು, ಅವು ಜಾನುವಾರು, ಜನರ ಮೇಲೆ ದಾಳಿ ಮಾಡುತ್ತಿವೆ. ಗ್ರಾಮಸ್ಥರು ಹುಲಿಗಳ ಉಪಸ್ಥಿತಿಯಿಂದ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತಿರುವುದರಿಂದ, ಈ ಬಗ್ಗೆ ಅವರಿಂದ ಹೆಚ್ಚು ಪ್ರತಿರೋಧ ಬರುತ್ತಿಲ್ಲ.

‘ಪ್ರಸ್ತುತ, ಬುಡಕಟ್ಟು ಸಮುದಾಯಗಳು ಮತ್ತು ರಾಜ್ಯದ ಹುಲಿ ಮೀಸಲು ಪ್ರದೇಶಗಳು ಹಾಗೂ ಅವುಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಜಂಗಲ್ ಸಫಾರಿಗಳಿಂದ ಪ್ರಯೋಜನ ಪಡೆಯುತ್ತಿಲ್ಲ. ಸಫಾರಿಗಾಗಿ ಸಂಗ್ರಹಿಸಿದ ಶುಲ್ಕವನ್ನು ಆಯಾ ಪ್ರತಿಷ್ಠಾನಗಳು ಸಂಬಳ ಪಾವತಿ ಮತ್ತು ಮೂಲಸೌಕರ್ಯದ ಇತರ ನಿರ್ವಹಣೆಗಾಗಿ ಬಳಸಿಕೊಳ್ಳುತ್ತವೆ’ ಎನ್ನುತ್ತಾರೆ ನಾಗರಹೊಳೆ ಸಂರಕ್ಷಣಾ ಸೊಸೈಟಿಯ ಅಧ್ಯಕ್ಷ ಗೋಪಿಕೃಷ್ಣ.

ಬುಡಕಟ್ಟು ಮತ್ತು ಅರಣ್ಯವಾಸಿಗಳ ಸಹಕಾರವಿಲ್ಲದೆ ಅರಣ್ಯ ಸಂರಕ್ಷಣೆ ಬಹಳ ಕಷ್ಟ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಸಫಾರಿ ಸೇರಿದಂತೆ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಳೀಯ ಸಮುದಾಯಗಳಿಗೆ ನೇರ ಆರ್ಥಿಕ ಪ್ರೋತ್ಸಾಹ ಮತ್ತು ಸುಸ್ಥಿರ ಜೀವನೋಪಾಯ ಒದಗಿಸುವ ರೀತಿ ಇರಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಮಾರ್ಗಸೂಚಿಗಳು ಹೇಳುತ್ತವೆ. ಇದರಿಂದ ಸಮುದಾಯದ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ ಮತ್ತು ಸಂರಕ್ಷಣಾ ಪ್ರಯತ್ನಗಳಿಗೆ ಎಲ್ಲರೂ ಬದ್ಧರಾಗುವುದನ್ನು ಉತ್ತೇಜಿಸುತ್ತದೆ. ಆದರೆ, ಸದ್ಯ ಇದನ್ನು ಅನುಸರಿಸುತ್ತಿಲ್ಲ’ಎಂದು ಅವರು ಹೇಳುತ್ತಾರೆ.

ಅರಣ್ಯ ಮತ್ತು ಪ್ರಾಣಿಗಳ ನಡವಳಿಕೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಬುಡಕಟ್ಟು ಜನರಿಗೆ ಅವಕಾಶ ನೀಡುವುದರಿಂದ ಅವರಿಗೆ ಆರ್ಥಿಕ ಸ್ಥಿರತೆ ಒದಗಿಸಿದಂತಾಗುತ್ತದೆ. ಜತೆಗೆ ಅರಣ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಪ್ರಾಥಮಿಕ ಕರ್ತವ್ಯಕ್ಕೆ ಅರಣ್ಯ ಇಲಾಖೆಗೆ ಹೆಚ್ಚುವರಿ ಬೆಂಬಲ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.