ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾಸಮಿತಿ ಜಂಟಿಯಾಗಿ ನ. 30ರಂದು ಸಂಜೆ 6 ಗಂಟೆಗೆ ಅಕ್ಷಯ ಗಾರ್ಡನ್‌ನ ಎದುರು ನುಡಿ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ.

ನುಡಿ ಹಬ್ಬದ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಕ. ಮಾಲಿಪಾಟೀಲ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹಬ್ಬಕ್ಕೆ ಈ ಬಾರಿ ಕೋವಿಡ್ ಅಡ್ಡಿಯಾಗಿದೆ. ಆದ್ದರಿಂದ ಮೆರವಣಿಗೆ ಇಲ್ಲದೆ ಸರಳವಾಗಿ ಆಚರಿಸಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೃಷಿ ಬಳಗದ ಅಧ್ಯಕ್ಷ ಕೆ.ಸಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು. ಕಲಾವಿದರಾದ ಅಮೋಘ ಖೊಬ್ರಿ, ದೊಡ್ಡಪ್ಪ ಮಾದರ, ಬಸವ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಹತ್ತಿ, ಗುತ್ತಿಗೆದಾರರಾದ ಚನ್ನಪ್ಪ ಮೊರಬದ, ರಾಘವೇಂದ್ರ ಶೆರೆಗಾರ ಅತಿಥಿಗಳಾಗಿ ಪಾಲ್ಗೊಳ್ಳುವರು.

‘ಕನ್ನಡ ಕೃಷಿ ಬಳಗದ ವತಿಯಿಂದ ನಿವೃತ್ತ ಪ್ರಾಧ್ಯಾಪಕ ಕೆ.ಎಸ್. ಕೌಜಲಗಿ ಮತ್ತು ಪತ್ರಕರ್ತ ಪ್ರಕಾಶ ನೂಲ್ವಿ ಅವರಿಗೆ ‘ಕನ್ನಡ ರತ್ನ’, ಬಸವ ಸೇವಾ ಸಮಿತಿಯಿಂದ ಜೀವ ವಿಮೆ ನಿವೃತ್ತ ಅಭಿವೃದ್ಧಿ ಅಧಿಕಾರಿ ಶಿವಲಿಂಗಪ್ಪ ಜೋಡಳ್ಳಿ ಮತ್ತು ಕರ್ನಾಟಕ ಲಿಂಗಾಯತ ನೌಕರರ ಸಂಘದ ಮಾಜಿ ಅಧ್ಯಕ್ಷ ಈಶ್ವರ ಸಾಣೆಕೊಪ್ಪ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

ಬಸವ ಸೇವಾ ಸಮಿತಿ ಮಾಜಿ ಅಧ್ಯಕ್ಷ ಡಾ. ಎಚ್.ವಿ. ಬೆಳಗಲಿ, ಸುಮಧುರ ಫೌಂಡೇಷನ್ ಅಧ್ಯಕ್ಷೆ ಪ್ರೇಮಾ ಹೂಗಾರ, ನುಡಿಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಶಿವಯೋಗಪ್ಪ ಯಮ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.