ಭಾನುವಾರ, ಅಕ್ಟೋಬರ್ 17, 2021
23 °C

ಐಟಿ ದಾಳಿ ಮೂಲಕ ಬಿಎಸ್‌ವೈ ಅವರನ್ನು ಮುಗಿಸುವ ತಂತ್ರ: ಹರಿಪ್ರಸಾದ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭ್ರಷ್ಟಾಚಾರದ ಕಾರಣಕ್ಕಾಗಿಯೇ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲಾಗಿದೆ ಎಂಬುದು ಅವರ ಆಪ್ತರ ಮೇಲೆ ನಡೆಸಲಾದ ಐಟಿ ದಾಳಿ ಮೂಲಕ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಯಡಿಯೂರಪ್ಪ ಅವರನ್ನ ಗುರಿ ಮಾಡಿ ರಾಜಕೀಯವಾಗಿ ಅವರನ್ನು ಮುಗಿಸುವ ಪ್ರಯತ್ನ ಇದಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪಕ್ಷದವರೇ ಸಾಕಷ್ಟು ಆಪಾದನೆ ಮಾಡಿದ್ದರು. ಭ್ರಷ್ಟಾಚಾರದ ಆರೋಪ ಇರುವ ಕಾರಣದಿಂದಲೇ ಅವರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ’ ಎಂದರು.

ಯಡಿಯೂರಪ್ಪ ಪಕ್ಷದಲ್ಲಿ ಮೊದಲೇ ಮೂಲೆ ಗುಂಪಾಗಿದ್ದರು. ಪಕ್ಷಕ್ಕೆ ಎಟಿಎಂ ತರ ಇದ್ದರು. ಯಡಿಯೂರಪ್ಪ ಅವರಿಂದ ಕಪ್ಪು ಕಾಣಿಕೆ ಪ್ರತಿ ಬಾರಿಯೂ ಸಲ್ಲಿಕೆಯಾಗುತ್ತಿತ್ತು. ಕಪ್ಪುಕಾಣಿಕೆ ಹೋಗುವುದು ಯಾವಾಗ ನಿಂತಿತೊ ಆಗ ಅವರಿಂದ ಸಿಎಂ ಸ್ಥಾನ ಕಿತ್ತುಕೊಳ್ಳಲಾಯಿತು ಎಂದರು.

‘ಇಂದಿನ ಐಟಿ ದಾಳಿ ಸುಮ್ಮನೆ ಸ್ಯಾಂಪಲ್ ಅಷ್ಟೇ. ಬೇರೆ ನಾಯಕರು ಹಾಗೂ ಆಪ್ತರ ಮೇಲೆಯೂ ದಾಳಿ ಮಾಡಿದರೆ ಸಾಕಷ್ಟು ಹಣ ಸಿಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು