ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains: ಹುಬ್ಬಳ್ಳಿ-ಧಾರವಾಡದಲ್ಲಿ ಗುಡುಗು ಸಹಿತ ಭಾರಿ ಮಳೆ

Published 22 ಏಪ್ರಿಲ್ 2024, 2:28 IST
Last Updated 22 ಏಪ್ರಿಲ್ 2024, 2:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಸೋಮವಾರ ನಸುಕಿನಿಂದ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ವಾತಾವರಣ ತಂಪಾಗಿಸಿದೆ. ರಾತ್ರಿಯಿಂದ ಮೋಡ ಕವಿದ ವಾತಾವರಣ ಇತ್ತು.

ವಾಯು ವಿಹಾರ, ಹಾಲು ತರಲು ಹೊರಟವರು ಕೈಯಲ್ಲಿ ಛತ್ರಿ ಹಿಡಿದು ಮತ್ತು ರೇನ್ ಕೋಟ್ ಧರಿಸಿ ಸಾಗಿದರು.

'ಬಿಸಿಲು ತಾಗದಿರಲಿ‌ ಎಂದು ಛತ್ರಿ ಹಿಡಿದು, ಓಡಾಡುತ್ತಿದ್ದೆವು. ಈಗ ಅದೇ ಛತ್ರಿ ಮಳೆ‌‌ ಸಂದರ್ಭದಲ್ಲೂ ಬಳಕೆ ಆಗುತ್ತಿದೆ.‌‌ ಸುಡು ಬಿಸಿಲು ಆಯಾಸಗೊಳಿಸಿತ್ತು. ಮಳೆಯು ವಾತಾವರಣ ಹಿತಕರಗೊಳಿಸಿದೆ' ಎಂದು ಹಿರಿಯರಾದ ಶ್ರೀನಿವಾಸಯ್ಯ ತಿಳಿಸಿದರು.

'ಇದೇ ರೀತಿ ಮಳೆ ಸುರಿದರೆ, ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೃಷಿ‌ ಚಟುವಟಿಕೆಯು ನಿರಾತಂಕವಾಗಿ ನಡೆಯುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT