ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನಂತೆ ಓಡಿ ನೋಡುಗರ ಮೈಜುಮ್ಮೆನಿಸಿದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ

Published 3 ಏಪ್ರಿಲ್ 2024, 13:48 IST
Last Updated 3 ಏಪ್ರಿಲ್ 2024, 13:48 IST
ಅಕ್ಷರ ಗಾತ್ರ

ನವಲಗುಂದ: ಬರಗಾಲ ಹಾಗೂ ಲೋಕಸಭಾ ಚುನಾವಣೆ ನಡುವೆಯೂ ತಿರ್ಲಾಪುರ ಗ್ರಾಮದ ರೈತರು ಗ್ರಾಮೀಣ ಕ್ರೀಡೆಯನ್ನು ಆಯೋಜಿಸಿ ಖುಷಿ ಪಟ್ಟರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಗಾಡಾ ಸ್ಪರ್ಧೆಗೆ ವಿಧಿಸಿದ್ದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ ಯಶಸ್ವಿ ಸ್ಪರ್ಧೆ ಮಾಡಿದ್ದಾರೆ.

ಹೌದು ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸುವ ಮೂಲಕ ರೈತರು ಖುಷಿ ಪಟ್ಟರು

ಸ್ಪರ್ಧೆಯಲ್ಲಿ ಹಳೇಹುಬ್ಬಳ್ಳಿಯ ಸಿದ್ಧಾರೂಢ ಪ್ರಸನ್ನ ಎಂಬ ಜೋಡಿಯ ಗಾಡಾ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಒಂದು ಲಕ್ಷ ಬಹುಮಾನ, ಬೆಳಗಿನಕೊಪ್ಪದ ಈಶ್ವರ ಲಿಂಗೇಶ್ವರ ಪ್ರಸನ್ನ ದ್ವಿತೀಯ ಸ್ಥಾನ (75 ಸಾವಿರ ಬಹುಮಾನ) ಪಡೆದರೆ, ಬೆಳಗುಂದಿಯ ಜ್ಯೋತಿರ್ಲಿಂಗ ಪ್ರಸನ್ನ ತೃತೀಯ (ಐವತ್ತು ಸಾವಿರ), ಪಡೆದವು.

ಇನ್ನೂ ಕರಡಿಗುಡ್ಡದ ಸಿದ್ದೇಶ್ವರ ಪ್ರಸನ್ನ ಚತುರ್ಥ ( ಮೂವತ್ತು ಸಾವಿರ), ಬೆಳಗಾವಿಯ ಜ್ಯೋತಿರ್ಲಿಂಗ ಪ್ರಸನ್ನ ಐದನೆಯ ಬಹುಮಾನ (ಇಪ್ಪತ್ತು ಸಾವಿರ), ಆರನೇ ಸ್ಥಾನವನ್ನು ಅಲಕವಾಡದ ಆಂಜನೇಯ ಪ್ರಸನ್ನ (ಹದಿನೈದು ಸಾವಿರ) ಹಾಗೂ ತಿರ್ಲಾಪುರ ಗ್ರಾಮದ ಇದೇ ಹೆಸರಿನ ಮತ್ತೊಂದು ಜೋಡಿ ಏಳನೆಯ ಸ್ಥಾನ (ಹನ್ನೆರಡು ಸಾವಿರದ ಐದು ನೂರು ರೂ ) ಪಡೆದರೆ, 8ನೆಯ ಸ್ಥಾನವನ್ನು ಕಡದಳ್ಳಿಯ ಕಲ್ವೇಶ್ವರ ಪ್ರಸನ್ನ (ಹತ್ತು ಸಾವಿರ ರೂ ), ಚಿಕ್ಕಮಲ್ಲಿಗವಾಡದ ಲಕ್ಷ್ಮೀಶ್ವರ ಪ್ರಸನ್ನ 9ನೇ ಸ್ಥಾನ ( ಐದು ಸಾವಿರ ರೂ ), ಹಲಗಲಿಯ ನಾಗಲಿಂಗೇಶ್ವರ ಪ್ರಸನ್ನ ( ನಾಲ್ಕು ಸಾವಿರ ಐದುನೂರು ರೂ ) ಬಹುಮಾನ ಪಡೆದವು.

ಇನ್ನು ಜೋಡಳ್ಳಿ ಗೋರಬಾಳದ ಗ್ರಾಮದೇವತಾ ಪ್ರಸನ್ನ ಎಂಬ ಜೋಡಿ ವಿಶೇಷ ಬಹುಮಾನ (ಆರು ಸಾವಿರಐದು ನೂರು ) ಪಡೆಯಿತು.

ಬಹುತೇಕ ಕೃಷಿ ಚಟುವಟಿಕೆಗಳು ಮುಕ್ತಾಯವಾದ ನಂತರ, ತನ್ನ ಸಹಪಾಠಿ ಜಾನುವಾರುಗಳ ಕ್ರೀಡೆಗಳನ್ನ ಆಯೋಜಿಸಿ ಮನರಂಚನೆ ಪಡುತ್ತಿದ್ದಾರೆ . ದನ ಬೆದರಿಸುವುದು, ಎತ್ತಿನಗಾಡಿ ಓಟ ಮತ್ತು ಟಗರು ಕಾಳಗ ಹೀಗೆ ಗ್ರಾಮೀಣ ಸೊಗಡಿನ ಕ್ರೀಡೆ ನೋಡಲು ಬಲು ಚಂದ

ಒಂದಡೆ ಮಿಂಜಿನ ನಂತೆ ಓಡಿ ದುಳೆಬ್ಬಿಸುತ್ತಿರುವ ಎತ್ತುಗಳು. ಇನ್ನೊಂದಡೆ ಗಾಡಿ ಮೇಲೆ ಕುಳಿತು ಸಿಳ್ಳೆ,ಕೇಕೆ ಚಪ್ಪಾಳೆ ಹೊಡೆದು ಎತ್ತುಗಳನ್ನು ಓಡಿಸುತ್ತಿರುವ ರೈತರು ಮೊತ್ತೊಂದಡೆ ಎತ್ತುಗಳು ಓಡಿದ ಅಂತರ ಗುರುತು ಮಾಡುತ್ತಿರುವ ಆಯೋಜಕರು ಇತ್ತ ಗಾಡಾ ಓಟವನ್ನು ಕಣ್ಣು ತುಂಬಿಕೊಂಡು ಮನರಂಜನೆ ಪಡುತ್ತಿರುವ ರೈತ ಸಮೂಹ ಈ ಎಲ್ಲ ದೃಶ್ಯ ಕಂಡು ಬಂದಿದ್ದು ತಿರ್ಲಾಪುರ ಗ್ರಾಮದ ಹೊರ ಒಲಯದಲ್ಲಿ.

ಈ ಸ್ಪರ್ಧೆಗೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ರೈತರು ಆಗಮಿಸಿದ 32 ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ದೂರ ದೂರದ ಊರುಗಳಿಂದ ಆಗಮಿಸಿದ ರೈತರು ತಮ್ಮ ನೆಚ್ಚಿನ ಹೋರಿಗಳನ್ನ ಗಾಡಿಗೆ ಕಟ್ಟಿ ಓಡಿಸಿದರು.ಕೆಲ ಹೋರಿಗಳು ಧೂಳೆಬ್ಬಿಸಿದರೆ, ಇನ್ನೂ ಕೆಲ ಎತ್ತುಗಳು ಮಿಂಚಿನಂತೆ ಓಡಿ ನೋಡುಗರ ಮೈಜುಮ್ಮೆನಿಸಿದವು.

ನವಲಗುಂದ ತಾಲೂಕಿನ ತಿರ್ಲಾಪುರದಲ್ಲಿ ಜರುಗಿದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ
ನವಲಗುಂದ ತಾಲೂಕಿನ ತಿರ್ಲಾಪುರದಲ್ಲಿ ಜರುಗಿದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT