ಹುಬ್ಬಳ್ಳಿ: ಹುಬ್ಬಳ್ಳಿಯ ಏಕೈಕ ಸಮುದಾಯ ಬಾನುಲಿ ಕೇಂದ್ರ ಕೆಎಲ್ಇ ಧ್ವನಿಯ ಇಂಟರ್ನೆಟ್ ಪ್ರಸಾರ ಸೇವೆ ಸೋಮವಾರ ಆರಂಭಗೊಂಡಿತು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತೇವರಿ ಅವರು ಕೆಎಲ್ಇ ಧ್ವನಿಯ ಸಿಗ್ನೇಚರ್ ಟ್ಯೂನ್ನ್ನು ಪ್ರಸಾರ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ಪ್ರಕಾಶ ತೇವರಿ ಮಾತನಾಡಿ, ‘ಕೆಎಲ್ಇ ಧ್ವನಿಯು ಕಳೆದ 11 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಸಮುದಾಯದ ಅಭಿವೃದ್ಧಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಹುಬ್ಬಳ್ಳಿಯ ಜನಮನದ ಧ್ವನಿಯಾಗಿದೆ. ಕೇವಲ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದ ಕೆಎಲ್ಇ ಧ್ವನಿ-ಬಿವಿಬಿ 90.4 ಈಗ ಜಗತ್ತಿನಾದ್ಯಂತ ಪ್ರಸಾರವಾಗಲಿದೆ’ ಎಂದು ಹೇಳಿದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ, ‘ಮೊಬೈಲ್ ಆ್ಯಪ್ ಮೂಲಕ ದೇಶ-ವಿದೇಶಗಳಲ್ಲಿ ಇಂಟರ್ನೆಟ್ ರೇಡಿಯೊ ಮೂಲಕ ಕೆಎಲ್ಇ ಧ್ವನಿಯು ಕೇಳಿಸಲಿದೆ’ ಎಂದು ಹೇಳಿದರು.

ಕೆಎಲ್ಇ ಧ್ವನಿಯ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೊ. ಬಿ.ಎಲ್. ದೇಸಾಯಿ, ಡೀನ್ ಸಂಜಯ ಕೊಟಬಾಗಿ, ಬಾಬಾ ಭೂಸದ, ಹಿರಿಯ ರಂಗಕರ್ಮಿ ಶಶಿಧರ ನರೇಂದ್ರ, ಎಂ.ಎಸ್. ಕೋಲ್ಹಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.