ಶುಕ್ರವಾರ, ಫೆಬ್ರವರಿ 28, 2020
19 °C

ಮಹಿಳಾ ಪೊಲೀಸರಿಗೆ ‘ಕ್ರಾವ್ ಮಗಾ’ ಆತ್ಮರಕ್ಷಣೆಯ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಪರಾಧ ತಡೆಗೆ ಮಹಿಳಾ ಪೊಲೀಸರನ್ನು ಮತ್ತಷ್ಟು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವಳಿನಗರ ಪೊಲೀಸ್ ಕಮಿಷನರೇಟ್, ಮಹಿಳಾ ಸಿಬ್ಬಂದಿಗೆ ಆತ್ಮರಕ್ಷಣೆಯ ತರಬೇತಿ ನೀಡುತ್ತಿದೆ.

‘ಕ್ರಾವ್ ಮಗಾ’ ಹೆಸರಿನ ದೈಹಿಕ ಹಾಗೂ ಮಾನಸಿಕ ಆತ್ಮರಕ್ಷಣಾ ಇಸ್ರೇಲಿ ತಂತ್ರವನ್ನು ‘ಎವೋಲ್ವ್‌ ಲೈವ್ಸ್ ಫೌಂಡೇಷನ್’ ಎಂಬ ಸರ್ಕಾರೇತರ ಸಂಸ್ಥೆಯು ಸಿಬ್ಬಂದಿಗೆ ನೀಡುತ್ತಿದೆ. ನಗರದ ಸಿಎಆರ್‌ ಮೈದಾನದಲ್ಲಿ ತರಬೇತುದಾರ ಬೆಂಗಳೂರಿನ ಫ್ರಾಂಕ್ಲಿನ್ ಜೋಸೆಫ್ ಮೂರು ದಿನಗಳಿಂದ 30 ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ.

‘ಪ್ರತಿಭಟನೆ, ಗಲಾಟೆ ನಿಯಂತ್ರಣ, ಎದುರಾಳಿಗಳ ದಾಳಿ ತಡೆಯುವುದು, ಪ್ರತಿ ದಾಳಿ, ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಹಾಗೂ ತುರ್ತು ಸಂದರ್ಭಗಳನ್ನು ನಿಭಾಯಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ಕಮಿಷನರ್ ಆರ್. ದಿಲೀಪ್ ಅವರ ಸಲಹೆ ಮೇರೆಗೆ ಮೊದಲ ಹಂತದಲ್ಲಿ 30 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜ. 24ರಂದು ತರಬೇತಿ ಅಂತ್ಯಗೊಳ್ಳಲಿದೆ’ ಎಂದು ‘ಎವೋಲ್ವ್‌ ಲೈವ್ಸ್ ಫೌಂಡೇಷನ್’ ಎನ್‌ಜಿಒ ಸಂಸ್ಥಾಪಕಿ ಒಟ್ಟಿಲೆ ಅನ್ಬನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರಾವ್‌ ಮಗಾ ಆತ್ಮರಕ್ಷಣಾ ಕಲೆಯ ತರಬೇತಿಯನ್ನು ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ಪುರುಷರಿಗೂ ನೀಡಬಹುದಾಗಿದೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಮುಂದೆ ತರಬೇತಿ ನೀಡುವ ಆಲೋಚನೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು